ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜುಲೈನಲ್ಲಿ ಟೊಮೇಟೊ ಮಾರುಕಟ್ಟೆ ಲೋಕಾರ್ಪಣೆ: ಮಹೇಶ್ ಭರವಸೆ

Mainashree
Updated On : 23 Jun 2014, 11:04 am

ಬಂಗಾರಪೇಟೆ: ರೈತರ ಮಹತ್ವಕಾಂಕ್ಷೆಯಿಂದ ನಿರೀಕ್ಷೆಯಲ್ಲಿರುವ ಅತ್ಯಾಧುನಿಕ ಟೊಮೆಟೋ ಮಾರುಕಟ್ಟೆಯನ್ನು ಮುಂದಿನ ತಿಂಗಳು ಶತಾಯಗತಾಯ ಲೋಕಾರ್ಪಣೆ ಮಾಡುವುದಾಗಿ ಎಪಿಎಂಸಿ ಅಧ್ಯಕ್ಷ ಬಿ.ವಿ.ಮಹೇಶ್ ತಿಳಿದರು.
ಎಪಿಎಂಸಿ ಸಭಾಂಗಣದಲ್ಲಿ ಇತ್ತೀಚಿಗೆ ತಾಲೂಕಿನ ಮಾರಿಕುಪ್ಪ ಪಂಚಾಯ್ತಿ ವ್ಯಾಪ್ತಿಯ ಕುರೂರು ಗ್ರಾಮದ ಮುನಿಸ್ವಾಮಿಗೌಡ ಆಕಸ್ಮಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಡಿಯಲ್ಲಿ 50 ಸಾವಿರ ಪರಿಹಾರದ ಚೆಕ್ ವಿತರಿಸಿ ಈ ವಿಷಯ ತಿಳಿಸಿದರು.
ತಾಲೂಕಿನಲ್ಲಿ ರೈತರು ಹೆಚ್ಚಾಗಿ ಟೊಮೆಟೋ ಬೆಳೆಯನ್ನು ಬೆಳೆಯುತ್ತಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ದೂರದ ನಗರಗಳಿಗೆ ಹೋಗುವಂತಾಗಿದೆ. ಇದನ್ನು ತಪ್ಪಿಸಲು ಪಟ್ಟಣದಲ್ಲೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಸಂಸ್ಥೆ ನಿರ್ಧರಿಸಿ, ಈಗಾಗಲೇ ನಿರ್ಮಾಣ ಮಾಡಿದೆ. ಆದರೆ ಹಲವು ಅಡ್ಡಿಗಳಿಂದ ಟೊಮೆಟೋ ಮಾರುಕಟ್ಟೆ ಉದ್ಘಾಟನೆ ಸಾಧ್ಯವಾಗಿಲ್ಲ. ಮುಂಬರುವ ಜುಲೈ ತಿಂಗಳಲ್ಲಿ ಉದ್ಘಾಟಿಸಲುಸಕಲ ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಈ ವೇಳೆ ಸಂಸ್ಥೆ ನಿರ್ದೇಶಕರಾದ ಕಾರಮಂಗಲ ಅಶ್ವಥ, ಮಂಜುನಾಥರೆಡ್ಡಿ, ಜಿ.ಕೆ.ಶಿವಶಂಕರ್,ಅಮರನಾರಾಯಣರೆಡ್ಡಿ, ದಶರಥರೆಡ್ಡಿ, ಸೀತಾರಾಮಯ್ಯ, ಕಾರ್ಯದರ್ಶಿ ರಾಮದೇವರು, ರವಿ, ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement