ಮಾಲೂರು ರಸ್ತೆಗೆ 5 ಕೋಟಿ
ಮಾಲೂರು: ಪಟ್ಟಣದಲ್ಲಿ ರು. 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಪೂರ್ಣವಾಗುತ್ತ ಬಂದಿದ್ದು, ಪಟ್ಟಣದಲ್ಲಿ ಉಳಿದ ರಸ್ತೆಗಳಿಗೆ ಮತ್ತೇ ರು. 5 ಕೋಟಿ ಮಂಜೂರಾಗಿದೆ ಎಂದು ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣದ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾತನಾಡಿ, ಗುಣಮಟ್ಟದಲ್ಲಿ ರಾಜಿಯಾಗದೆ ಕಾಮಗಾರಿ ನಡೆಯುತ್ತಿದೆ ಎಂದರು. ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಜತೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕಾಗಿದ್ದು, ಇದರಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ವಾರ್ಡ್ಗಳಲ್ಲಿ ಕಂಟೈನರ್ ಇಡಲಾಗಿದೆ. ಆದರೆ ಕೆಲವರು ಲ್ಲಿ ಕಸ ಹಾಕದೆ ಹೊರಗೆ ಹಾಕುವ ಜತೆಗೆ ಕಂಟೈನರ್ನಲ್ಲಿರುವ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ ಕಂಟೈನರ್ ಹಾಳಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚತ್ತುಕೊಳ್ಳಬೇಕು ಎಂದು ಮನವಿ ಅವರು ಮಾಡಿದರು. ಉಪಾಧ್ಯಕ್ಷೆ ಶ್ರೀವಲ್ಲಿ ರಮೇಶ್, ಸುಲೋಚನ ಮಂಜುನಾಥ್, ರಾಮಮೂರ್ತಿ, ವೇಮನ, ಹನುಮಂತರೆಡ್ಡಿ, ಅಭಿಯಂತರ ಮಂಜುನಾಥ್, ಮುರಳಿ, ನಾಗರಾಜ್, ಮುಖಂಡ ನಂಜುಂಡಪ್ಪ, ಆಂಜಿ, ಮಂಜುನಾಥ್, ಗುತ್ತಿಗೆದಾರ ಭಾಸ್ಕರ್ ಇದ್ದರು.