ಧರ್ಮ ಪಾಲನೆಯಾದಾಗ ಸಮಾಜದಲ್ಲಿ ನೆಮ್ಮದಿ ಸಾಧ್ಯ
ಮಾಲೂರು: ನಮ್ಮ ಅಚಾರ ವಿಚಾರಗಳನ್ನು ಧರ್ಮದ ಆಧಾರದ ಮೇಲೆ ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ಅವರು ತಾಲೂಕಿನ ಶಿವಾರ ಪಟ್ಟಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ತಮ್ಮ ಕುಟುಂಬದ ಸದಸ್ಯರ ಸಹಯೋಗದಲ್ಲಿ ಕೋದಂಡರಾಮಸ್ವಾಮಿ ಸಂಪುಟದಲ್ಲಿ ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಾಲಯದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿ ಮಾತನಾಡುತ್ತಾ, ವಿವಿಧತೆ ಇರುವ ಸಮಾಜದಲ್ಲಿ ಧರ್ಮದಂತೆ ನಡೆದುಕೊಳ್ಳಬೇಕಾಗಿದೆ ಎಂದರು.
ಶಾಂತಿ ಕೇಂದ್ರ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾತನಾಡಿ, ತಮ್ಮ ಸಹೋದರರು ಸೇರಿದಂತೆ ಗ್ರಾಮಸ್ಥರು ನೀಡಿದ ಸಹಕಾರದಿಂದ ಗ್ರಾಮದಲ್ಲಿ ದೇವಾಲಯವನ್ನು ಪುನರ್ ನಿಮಾರ್ಣ ಮಾಡಲಾಗಿದೆ. ಶಾಂತಿ ನೀಡುವ ಈ ನೆಮ್ಮದಿ ಕೇಂದ್ರವನ್ನು ಗ್ರಾಮಸ್ಥರು ನಿತ್ಯ ಭೇಟಿ ನೀಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಇದೇ ಸಂಧರ್ಭದಲ್ಲಿ ದೇವಾಲಯ ಶಿಲ್ಪಿ ಪುರುಷೋತ್ತಮ್ ದಂಪತಿಗಳನ್ನು ಚಿನ್ನದ ಉಂಗುರ, ಸರ ಹಾಗೂ ಸಂಭಾವನೆಗಳನ್ನು ಕೆ.ಹೆಚ್.ಮುನಿಯಪ್ಪ ದಂಪತಿಗಳು ಹಾಗೂ ಕೃಷ್ಣಯ್ಯ ಶೆಟ್ಟಿ ದಂಪತಿಗಳು ನೀಡಿ ಗೌರವಿಸಿದರು.
ಸಂಸದ ಕೆ.ಹೆಚ್.ಮುನಿಯಪ್ಪ ಅವರ ಧರ್ಮ ಪತ್ನಿ ನಾಗರತ್ನ, ಸುನೀತಾ ಕೃಷ್ಮಯ್ಯ ಶೆಟ್ಟಿ, ಜಿ.ಪಂ.ಸದಸ್ಯೆ ಯಲ್ಲಮ್ಮ, ರಾಮಸ್ವಾಮಿ ರೆಡ್ಡಿ, ತಾ.ಪಂ.ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಪುಟ್ಟಸ್ವಾಮಿ, ನಾಗವೇಣಿ ಚಂದ್ರು, ಪಂಚಾಯ್ತಿ ಅಧ್ಯಕ್ಷ ಜಗನ್ನಾಥಾಚಾರಿ, ಹೆಚ್.ಹನುಮಂತಪ್ಪ, ಅಶ್ವಥ್ ರೆಡ್ಡಿ, ಕಾಂಗ್ರೆಸ್‌ನ ರಘುನಾಥ್, ಚೆನ್ನರಾಯಪ್ಪ, ಮುನಿರಾಜು, ಪಾಪಾರೆಡ್ಡಿ, ಶಿವಣ್ಣ, ನಯೀಂ, ರವೀಂದ್ರ ರೆಡ್ಡಿ ಇದ್ದರು.