ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶುಲ್ಕ ವಿವರ ಪ್ರಕಟಿಸದ ಶಾಲೆಗಳ ಮಾನ್ಯತೆ ರದ್ದು-ಡಿಡಿಪಿಐ ಎಚ್ಚರಿಕೆ

Mainashree
Updated On : 24 Jun 2014, 11:10 am

ಕೋಲಾರ: ಖಾಸಗಿ ಶಾಲೆಗಳು ಮಕ್ಕಳ ದಾಖಲಾತಿ ಶುಲ್ಕಗಳ ಮಾಹಿತಿಯನ್ನು ಜೂ.27ರೊಳಗೆ ಶಾಲೆಯ ಕಚೇರಿ ಗೋಡೆಯ ಪ್ರಕಟಿಸದಿದ್ದರೆ ಅಂಥ ಶಾಲೆಗಳ ಮಾನ್ಯತೆ ರದ್ದುಪಡಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ.ಪದ್ಮನಾಭ್ ಎಚ್ಚರಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಂಗಳವಾರ ಇಲಾಖೆಯ ವಿಷಯ ಪರಿವೀಕ್ಷಕರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರ ತುರ್ತು ಸಭೆಯಲ್ಲಿ ಅವರು ಮಾತನಾಡಿ, ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಇಲಾಖೆಯ ಗಮನಕ್ಕೆ ತಂದಿರುವ ಹಿನ್ನಲೆಯಲ್ಲಿ ಕ್ರಮ ಅಗತ್ಯವೆಂದು ತಿಳಿಸಿದ್ದಾರೆ. ಪ್ರತಿ ಶಾಲೆಯ ಮುಂದೆ ವಸೂಲಿ ಮಾಡುವ ಶುಲ್ಕದ ಮಾಹಿತಿಯನ್ನು ಬಣ್ಣದಿಂದ ಬರೆಸಲು ಶಾಲೆಗೆ ಭೇಟಿ ನೀಡಿದ್ದ ಇಲಾಖಾಧಿಕಾರಿಗಳು ಮಾರ್ಗದರ್ಶನ ನೀಡಿದ್ದರೂ, ಹಲವಾರು ಶಾಲೆಗಳು ಇನ್ನು ಬರೆಸದಿರುವುದು ತಮ್ಮ ಗಮನಕ್ಕೆ ತಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಸೂಚನೆ ಪಾಲಿಸಿರುವ ಕುರಿತು ದೃಢಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಇಲಾಖೆ ಮೇ ಕೊನೆ ವಾರವೇ ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ಸೇರಿ ಸದಿರಿ ಮತ್ತು ಶಾಲೆಯ ಮಾನ್ಯತೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಪೋಷಕರಲ್ಲಿ ಮನವಿ ಮಾಡಲಾಗಿತ್ತು. ಆದರೂ ಕೆಲವು ಪೋಷಕರು ಇಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾದರೆ ಅದರಿಂದಾಗುವ ತೊಂದರೆಗೆ ಅವರೇ ಕಾರಣರಾಗುತ್ತಾರೆಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement