ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆನರಾ ಬ್ಯಾಂಕ್ ಗುರುತಿಸಿದ ಹಳ್ಳಿಗಳ ದತ್ತು: ಶಿವಶಂಕರ್

Mainashree
Updated On : 27 Jun 2014, 12:26 pm

ಮಾಲೂರು: ಗ್ರಾಮೀಣ ಮತ್ತು ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೆನರಾ ಬ್ಯಾಂಕ್ ಗುರುತಿಸಲ್ಪಟ್ಟ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದು ಕೋಲಾರ ವಿಭಾಗೀಯ ವ್ಯವಸ್ಥಾಪಕ ಎಂ.ಶಿವಶಂಕರ್ ಹೇಳಿದರು.
ತಾಲೂಕಿನ ಅಬ್ಬೇನಹಳ್ಳಿ ಗ್ರಾಮ ವ್ಯಾಪ್ತಿಯ ಕಂಬಿಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕೆನರಾ ಬ್ಯಾಂಕ್ ಗ್ರಾಮ ದತ್ತು ಸ್ವೀಕರಣಾ ಸಮಾರಂಭದಲ್ಲಿ ಮಾತನಾಡಿ, ಶೈಕ್ಷಣಿಕ ಪ್ರಗತಿ ಗ್ರಾಮ-ರಾಜ್ಯ-ದೇಶದ ಪ್ರಗತಿಯಾಗಿದೆ. ಗ್ರಾಮೀಣ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ವ್ಯಾಸಂಗ ಮಾಡಲಿ ಎಂಬ ಉದ್ದೇಶದಿಂದ ಗ್ರಾಮದ ಶಾಲೆ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿ-ಪರಿಕರಗಳನ್ನು ಕೆನರಾ ಬ್ಯಾಂಕ್ ಉಚಿತವಾಗಿ ನೀಡುತ್ತಿದೆ ಎಂದರು. ಮಾಲೂರು ಶಾಖೆಯ ವ್ಯವಸ್ಥಾಪಕಿ ಉಷಾ ರಾಮ್ ಕುಮಾರ್ ಮಾತನಾಡಿ, ಸ್ತ್ರೀಶಕ್ತಿ ಸಂಘಗಳು ಬ್ಯಾಂಕ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಣ್ಣ ಸಾಲಗಳನ್ನು ಪಡೆದು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿ ಮಾಡುವ ಜತೆಯಲ್ಲಿ ತಾವೂ ಅರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು. ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡಲಾಯಿತು. ಬ್ಯಾಂಕ್ ವಿಸ್ತರಣಾಧಿಕಾರಿ ಎನ್.ನಾಗವೇಣಿ, ಜಿ.ರಾಮ್ ಕುಮಾರ್, ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಶಾಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಶಿಕ್ಷಕ ಉಮೇಶ್, ವೆಂಕಟೇಶ್ ಮೂರ್ತಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ನೇತ್ರಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement