ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿಗಳೂ ಬಂದ್ರೂ ದೂರುಗಳೇ ಇಲ್ಲ್ಲ

Vishwanath S
Updated On : 28 Jun 2014, 12:33 pm

ಬಂಗಾರಪೇಟೆ: ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಶುಕ್ರವಾರ ಪಟ್ಟಣಕ್ಕೆ ಕೋಲಾರ ಲೋಕಾಯುಕ್ತ ಪೊಲೀಸರು ಬಂದಿದ್ದರೂ ದೂರುದಾರರು ಮಾತ್ರ ಕಾಣಲಿಲ್ಲ. ಇದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಎರಡು ಗಂಟೆ ಕಾದು ಹಿಂತಿರುಗಬೇಕಾಯಿತು.
 ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋಲಾರ ಲೋಕಾಯುಕ್ತ ಅಧೀಕ್ಷಕ ಸುಭ್ರಮಣಿ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿದ್ದರು. ಆದರೆ ಇವರು ಬರುವ ಮಾಹಿತಿ ಸಾರ್ವಜನಿಕರಿಗೆ ತಿಳಿಯದ ಕಾರಣ ಯಾವುದೇ ಇಲಾಖೆ ಬಗ್ಗೆ ಯಾರೊಬ್ಬರೂ ದೂರುಗಳನ್ನು ನೀಡಲು ಮುಂದೆ ಬಂದಿಲ್ಲ. ಕೇವಲ 5 ದೂರುಗಳು ಮಾತ್ರ ಸಲ್ಲಿಕೆಯಾದವು. ಈ ಹಿಂದೆ ಲೋಕಾಯುಕ್ತರು ದೂರುಗಳನ್ನು ಸ್ವೀಕರಿಸಲು ಬಂದಿದ್ದಾಗ ಹತ್ತಾರು ದೂರುಗಳು ಸಲ್ಲಿಕೆಯಾಗಿತ್ತು. ಅವುಗಳಲ್ಲಿ ಬಹುತೇಕ ದೂರುಗಳಿಗೆ ಇದುವರೆಗೂ ಮೋಕ್ಷ ಸಿಕ್ಕಿಲ್ಲದ ಕಾರಣ ಯಾರೂ ಇತ್ತ ತಲೆ ಹಾಕದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಉದ್ಯಾನವನ ರಕ್ಷಿಸಿ: ಪಟ್ಟಣದಲ್ಲಿರುವ ಏಕೈಕ ಉದ್ಯಾನವನವನ್ನು ರಕ್ಷಿಸುವ ಸಲುವಾಗಿ ವಕೀಲರರೊಬ್ಬರು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಉದ್ಯಾನವನದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅತಿಕ್ರಮಣ ಮಾಡಬಾರದು ಎಂದು ಆದೇಶ ನೀಡಿತ್ತು. ಆದರೆ ಇದನ್ನು ಪುರಸಭೆ ಪಾಲಿಸುತ್ತಿಲ್ಲ ಎಂದು ವಕೀಲರೊಬ್ಬರು ಲೋಕಾಯುಕ್ತರ ಗಮನ ಸೆಳೆದರು.  ಪುರಸಭೆ ಮುಖ್ಯಾಧಿಕಾರಿ ಜಹೀರ್ ಅಬ್ಬಾರ್ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಇಲ್ಲದಿದ್ದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಸಭೆಯಲ್ಲಿ ಡಿವೈಎಸ್ಪಿ ರಾಮಮೂರ್ತಿ, ವೃತ್ತ ನಿರೀಕ್ಷಕರಾದ ಅಶ್ವತನಾರಾಯಣ, ವೆಂಕಟಾಚಲಪತಿ, ತಹಸೀಲ್ದಾರ್ ಉಷಾ ಮತ್ತಿತತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement