'ಕಟ್ಟಡ ಕಾರ್ಮಿಕರಿಗೆ ಭದ್ರತಾ ಸೌಲಭ್ಯ ನೀಡಿರುವುದು ಸ್ವಾಗತಾರ್ಹ'
ಗೌರಿಬಿದನೂರು: ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಘನ ಸರ್ಕಾರ ಭದ್ರತಾ ಸೌಲಭ್ಯಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶರಾದ ಬಿ.ಕೆ.ರವಿಕಾಂತ ಶ್ಲಾಘಿಸಿದರು.
ಪುರ ಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಹರಿವು ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಮೂಲತಃ ಶ್ರಮಜೀವಿಗಳಾಗಿದ್ದು, ಇವರ ಭದ್ರತಾ ಇವರ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರವು ಮೀಸಲಿಟ್ಟಿರುವುದು ಸ್ವಾಗತಾರ್ಹ ಇವರ ಭವಿಷ್ಯಕ್ಕೆ ಕಾರ್ಮಿಕ ಕಲ್ಯಾಣ ನಿಗಮ ಸ್ಥಾಪನೆಮಾಡಿದೆ ಈ ಸೌಕರ್ಯ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ನೋಂದಣಿ ಸರಳ ವಿಧಾನವಾಗಿದ್ದು, ಇದರ ಸೌಲಭ್ಯವನ್ನು ಎಲ್ಲಾ ಕಾರ್ಮಿಕರು ಪಡೆಯಬೇಕೆಂದು ಕರೆಯಿತ್ತರು.
ಈ ಶ್ರಮಿಕರಿಗೆ ಮಾಲೀಕರಿಂದ ಹಕ್ಕು ಚ್ಯುತಿ ಬಂದರೆ ಅದು ಶಿಕ್ಷಾರ್ಹ ಎಂದು ಪರಿಗಣಿಸಲಾಗುವುದು ಎಂದರು. ಜಿಲ್ಲಾ ಕಾರ್ಮಿಕ ಅನಿರೀಕ್ಷಕ ಸೋಮಶೇಖರ್ ಮಾತನಾಡುತ್ತಾ ಕಾರ್ಮಿಕರ ಹಿತ ರಕ್ಷಣೆಗೆ ಸರ್ಕಾರವು ಬದ್ದವಾಗಿದ್ದು, ಇವರ ಮೂಲಭೂತ ಸೌಕರ್ಯಕ್ಕೆ ಹಣ ಹೀಗಾಗಲೇ ಮೀಸಲಿಡಲಾಗಿದೆ. ಈ ಸೌಲಭ್ಯ ಪಡೆಯಲು ಪ್ರತಿ ಕಾರ್ಮಿಕ ನೋಂದಣಿ ಮಾಡಿಸತಕ್ಕದ್ದು. ಈ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ, ಉನ್ನತ ವ್ಯಾಸಂಗಕ್ಕಾಗಿ ಸುಲಭ ರೀತಿಯಲ್ಲಿ ಧನಸಹಾಯ, ಸ್ವಂತ ಮನೆ ನಿರ್ಮಾಣಕ್ಕಾಗಿ ರಾಷ್ಟ್ರೀಕೃತ ಬ್ಯಾಂಕಗಳಿಂದ ಕಡಿಮೆ ಬಡ್ಡಿದರದಲ್ಲಿ ದನಸಹಾಯ, ಹಿರಿಯರಿಗೆ ಪಿಂಚಣಿ ಸೌಲಭ್ಯ, ಮಹಿಳೆಯರಿಗೆ ಮಾಸಿಕ ವೇತನ ನೀಡಲಾಗುವುದು. ಕೆಲಸದ ವೇಳೆ ಅಂಗಹೂನತೆಯಾದರೆ ಉಚಿತ ಚಿಕಿತ್ಸೆ, ಹಾಗೂ ತಕ್ಷಣ ಪರಿಹಾರ ನೀಡುವ ಸೌಲಭ್ಯ ಸರ್ಕಾರ ನೀಡಿದೆ.
ಕಾರ್ಯಾಕ್ರಮದಲ್ಲಿ ಪುರ ಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಸರ್ಕಾರಿ ಅಭಿಯೋಜಕ, ಎಂ.ವಿ.ತ್ಯಾಗರಾಜು, ವಕೀಲರಾದ ಅರ್ಜುನ್, ಕಾರ್ಮಿಕ ನಿರೀಕ್ಷ ಸೋಮಶೇಖರ್, ಹಾಗೂ ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.