ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ಕೋಚ್ ಘಟಕ ಸ್ಥಾಪನೆ ನಿಲ್ಲದು: ವೈ.ಎ.ಎನ್

Mainashree
Updated On : 28 Jun 2014, 10:52 am

ಕೋಲಾರ/ಶ್ರೀನಿವಾಸಪುರ: ಜಿಲ್ಲೆಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆರ್ಥಿಕ ಸ್ಥಿತಿ ದುಸ್ತರವಾಗಿರುವುದರಿಂದ ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ  ರೇಲ್ವೆ ಕೋಚ್ ಘಟಕವನ್ನು ಯಾವುದೇ ಕಾರಣಕ್ಕೂ ನಿಲ್ಲಲು ಬಿಡುವುದಿಲ್ಲ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಟ್ಟು ಯೋಜನೆ ಜಾರಿಗೆ ತರುವಂತೆ ರೇಲ್ವೆ ಸಚಿವ ಸದಾನಂದಗೌಡರ ಮೇಲೆ ಒತ್ತಡ ತರುವುದಾಗಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
 ಶ್ರೀನಿವಾಸಪುರ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಮಂಡಿಸಲಿರುವ ರೇಲ್ವೆ ಬಜೆಟ್‌ನಲ್ಲಿ ರೇಲ್ವೆ ಕೋಚ್ ಘಟಕಕ್ಕೆ ಚಾಲನೆ ಸಿಗುವ ರೀತಿಯಲ್ಲಿ ಸ್ಪಷ್ಟ ಭರವಸೆ ನೀಡುವಂತೆ ಕೋರಲಾಗುವುದು, ರೇಲ್ವೆ ಸಚಿವ ಸದಾನಂದಗೌಡರಿಗೆ ಜಿಲ್ಲೆಯ ಸಮಸ್ಯೆ ಗೊತ್ತಿರುವುದರಿಂದ ಯೋಜನೆಗೆ ಸಹಕಾರ ನೀಡಲಿದ್ದಾರೆಂದರು.
ಜಮೀನು ವರ್ಗಾವಣೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಶೇ 50 ರಷ್ಟು ಬಂಡವಾಳವನ್ನು ಹೂಡಲು ಸಮ್ಮತಿಸಿದ್ದು ಅವಶ್ಯಕತೆ ಇರುವ ಜಮೀನನ್ನು ಸರ್ಕಾರ ಇಲಾಖೆಗೆ ವರ್ಗಾಯಿಸಿದೆ. ಎಲ್ಲಾ ಪ್ರಕ್ರಿಯೆಗಳು ಚಾಲ್ತಿಯಲ್ಲಿ ಇರುವುದರಿಂದ ರೇಲ್ವೆ ಕೋಚ್ ಘಟಕ ಪ್ರಾರಂಭಗೊಳ್ಳುವುದರಲ್ಲಿ ಅನುಮಾನವಿಲ್ಲವೆಂದರು.
 ಬಿಜೆಪಿ ಮುಖಂಡರಾದ ರಘುನಾಥ ರೆಡ್ಡಿ, ಜಯರಾಮ ರೆಡ್ಡಿ, ನಾರಾಯಣಸ್ವಾಮಿ, ಕೆ.ಕೆ ಮಂಜುನಾಥ್, ಅಶ್ಪತ್ಥ್ ರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement