ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಳೆ ಶಿಷ್ಯರಿಂದ ಗುರುಗಳಿಗೆ ಸನ್ಮಾನ

Mainashree
Updated On : 30 Jun 2014, 12:22 pm

ಚಿಕ್ಕಬಳ್ಳಾಪುರ: ಹಿಂದೆ ಶಾಲೆಯಲ್ಲಿ ಓದಿ ಆ ನಂತರ ಬೇರೆ ಬೇರೆ ಕಡೆ ಹೊರಟು ಹೋಗಿದ್ದವರು ಅಲ್ಲಿ ನೆರೆದಿದ್ದರು. ಆ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಬೋಧಿಸಿ ನಿವೃತ್ತಿಯಾದ ಗುರು ವೃಂದ ಸಹ ಅಲ್ಲಿತ್ತು. ಹೀಗೆ ಗುರು ಶಿಷ್ಯರ ಸಂಗಮದಲ್ಲಿ ಆತ್ಮೀಯ ಗುರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಷ್ಯರು ಪುಳುಕಿತರಾದರೆ, ಗುರುಗಳು ಶಿಷ್ಯರಿಂದ ಸಿಕ್ಕ ಗೌರವಕ್ಕೆ ಸಂತಸಗೊಂಡರು.
- ಇವು ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಕಂಡು ಬಂದ ತುಣುಕುಗಳು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಭೋಜ್‌ರಾಜ್, ಗುರುವಿನ ಸ್ಥಾನ ಪವಿತ್ರ. ದೇವರು ಮತ್ತು ಗುರುಗಳು ಎದುರಿಗೆ ನಿಂತರೆ ನಾನು ಮೊದಲು ಗುರುಗಳಿಗೆ ವಂದಿಸುತ್ತೇನೆ ಎಂದು ಕಬೀರ್  ದಾಸರು ತಿಳಿಸಿರುವುದು ಗುರುವಿನ ಮಹತ್ವಕ್ಕೆ ಸಾಕ್ಷಿ. ಗುರು ತನ್ನಲ್ಲಿನ ಬಲದಿಂದ ತನ್ನ ಶಿಷ್ಯರ ಜೀವನವನ್ನು ಉಜ್ವಲಗೊಳಿಸುವ ಸಲುವಾಗಿ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಎನ್ನುವುದನ್ನು ಅರ್ಥ ಮಾಡಿಸುತ್ತಾರೆ. ಬದುಕನ್ನು ಬದಲಾಯಿಸಲು ಶ್ರಮಿಸುತ್ತಾರೆ. ಹಿಂದೆ ಗುರುಗಳು ಕಲಿಸಿದ ವಿದ್ಯೆಯೇ ನಮ್ಮನ್ನು ಸಮಾಜದಲ್ಲಿ ಮುಂದೆ ಸಮರ್ಥವಾಗಿ ಬಾಳುವಂತೆ ಮಾಡುತ್ತದೆ. ಇಂತಹವರನ್ನು ಗೌರವಿಸುವಂತಹುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮವನ್ನು ಪಂಚಗಿರಿ ಬೋಧನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಉಷಾ ಮಕರಂದಂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಾರ್ಡನ್  ಜಿ.ಬಿ.ರಾಜಶೇಖರ್, ವಿದ್ಯಾರ್ಥಿಗಳ ಬಳಗದ ಅಭಿಲಾಷ್, ನರ್ಮದಾ, ಸುಹಾಸ್, ರವಿಕುಮಾರ್, ಮಂಚನಬಲೆ ಶ್ರೀನಿವಾಸ್  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಆತ್ಮೀಯ ಸನ್ಮಾನ: ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಆವಲಪ್ಪ, ಎಳೆಲಿಂಗಪ್ಪ, ಪಿ.ಎನ್ .ರಾಮರಾವ್, ವಿನಾಯಕ ಭಟ್ , ಜೋಸೆಫ್  ಕ್ರಿಸ್ತಫರ್, ಜಿ.ಪರಮಶಿವಯ್ಯ, ಅಂಬಿಕಮ್ಮ, ವಿ.ರಾಮಯ್ಯ, ರಾಮೇಗೌಡ, ಜಿ.ವಿ.ರಾಮಚಂದ್ರ ಮತ್ತು ಗುಮಾಸ್ತ ಬಿ.ಆರ್. ಲಕ್ಷ್ಮಣ್‌ಸ್ವಾಮಿ, ಅಟೆಂಡರ್ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement