ಅಪಘಾತದಲ್ಲಿ ಮೃತಪಟ್ಟ ಶಿಕ್ಷಕರಿಗೆ ಶ್ರದ್ಧಾಂಜಲಿ
ಮಾಲೂರು: ಕಳೆದ ವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬಂಗಾರಪೇಟೆ ತಾಲೂಕಿನ ಶಿಕ್ಷಕರ ಸಂಘದ ನಾಲ್ವರು ಪದಾಧಿಕಾರಿಗಳ ಗೌರವಾರ್ಥ ಸ್ಥಳೀಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಇಲ್ಲಿನ ಬಿಆರ್ಸಿ ಕೇಂದ್ರದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಶನಿವಾರ ಆಯೋಜಿಸಿತ್ತು. ಸಂಘದ ಅಧ್ಯಕ್ಷ ಮುನಿನಾರಾಯಣ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಉತ್ತಮ ಸ್ವಂದನೆ ನೀಡುತ್ತಿದ್ದ ನಾಲ್ಪರು ಶಿಕ್ಷಕರನ್ನು ಕಳೆದುಕೊಂಡಿರುವುದು ದುರಾದೃಷ್ಟಕರ ಎಂದರು. ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದ ಬಂಗಾರಪೇಟೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ಗೌಡ, ಪ್ರಾ.ಶಿ.ಸಂ. ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷ ಸಿದ್ದಪ್ಪ ಹಾಗೂ ಖಂಜಾಚಿ ಮೋಹನ್ ಕುಮಾರ್ರವರ ಸಾವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು. ಬಹುದ್ದೂರ್ ಸಾಬ್, ಶಶಿಧರ್ ಮಾತನಾಡಿದರು. ಎಸ್.ಎನ್. ಮುನಿರಾಜು, ರವಿ ಇದ್ದರು.