ಅಪಘಾತದಲ್ಲಿ ವ್ಯಕ್ತಿ ಸಾವು
ಮಾಲೂರು: ಇಲ್ಲಿನ ಹೂಸೂರು ರಸ್ತೆಯ ಚೂಡುಗೂಂಡನಹಳ್ಳಿ ಗೇಟ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡು ಆಸ್ವತ್ರೆ ಸೇರಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ತಾಲೂಕಿನ ಜಗದೇನಹಳ್ಳಿಯ ಸಂಪಂಗಪ್ಪ(49)ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬೈಕ್ ಸವಾರ ವೆಂಕಟೇಶನನ್ನು ಸ್ಥಳೀಯ ಆಸ್ವತ್ರೆಗೆ ಸೇರಿಸಲಾಗಿದೆ. ಬೈಕಿನಲ್ಲಿದ್ದ ವೆಂಕಟೇಶ್ ಹಾಗೂ ಸಂಪಂಗಪ್ಪ ಹೂಸೂರು ಮುಖ್ಯ ರಸ್ತೆಯಿಂದ ತಮ್ಮ ಗ್ರಾಮಕ್ಕಾಗಿ ತಿರುಗಿದಾಗ ಇದನ್ನು ಗಮನಿಸದ ಕಾರು ಬೈಕಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಪರಾರಿಯಾಗಿರುವ ಬೆಲೋರೂ ವಾಹನ ಚಾಲಕನಿಗಾಗಿ ತನಿಖೆ ಮುಂದುವರೆಸಿದ್ದಾರೆ.
ಸಾಹಿತ್ಯ ಬೆಳೆಸಬೇಕಾದ ಕರ್ತವ್ಯ ಯವಕರ ಮೇಲಿದೆ
ಮಾಲೂರು: ಕಲೆ ಸಾಹಿತ್ಯ ಬೆಳೆಸಬೇಕಾದ ಕರ್ತವ್ಯ ಇಂದಿನ ಯುವ ಜನಾಂಗದ ಮೇಲಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೃಷ್ಣಪ್ಪ ಹೇಳಿದರು.
ತಾಲೂಕಿನ ಚಿಕ್ಕಕುಂತೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಭೂಕೈಲಾಸ ಹರಿಕಥೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣ ಸಿಗುವ ಕಲೆ-ಸಂಸ್ಕೃಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನಾಂಗ ಮೇಲಿದೆ ಎಂದರು.
ಪ್ರಾಚೀನ ಕಲೆ ಉಳಿಯಬೇಕಾದರೆ ಹರಿಕಥೆ, ನಾಟಕ ಸೇರಿದಂತೆ ಗ್ರಾಮೀಣ ಭಾಗದ ಸಾಂಸ್ಕೃತಿಕ ಚಟುಟಿಕೆಗಳು ಆಗಾಗ ನಡೆಯುತ್ತಿರಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ವಿ.ನಾಗರಾಜ ರೆಡ್ಡಿ, ರಾಜಗೋಪಾಲ್ ರೆಡ್ಡಿ, ಮಲ್ಲಿಕಾರ್ಜುನ, ವಿ. ವೆಂಕಟಸ್ವಾಮಿ, ಪ್ರಕಾಶ್, ಮುನಿಯಪ್ಪ, ಆನಂದ್ ರೆಡ್ಡಿ, ವೆಂಕಟೇಶಪ್ಪ, ಸತ್ಯನಾರಾಯಣ ರಾವ್, ಮಂಜುನಾಥ್, ಕುಂತೂರು ಚಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.