ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಪ್ರತಿನಿಧಿಗಳಿಗೆ ಅರಿವು ಕಾರ್ಯಾಗಾರ

Rashmi Kasaragodu
Updated On : 2 Mar 2014, 1:23 am

ಶ್ರೀನಿವಾಸಪುರ: ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಶ್ರೀಮಂತರು ನಕಲಿ ದಾಖಲೆ ಸೃಷ್ಟಿಸಿ ಆರ್‌ಟಿಇಗೆ ಮುಗಿಬಿದ್ದು ಸರ್ಕಾರದ ಈ ಯೋಜನೆಯನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ  ಆರೋಪಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕು ಆಧಿನಿಯಮ 2009 ರ ಅನ್ವಯ ಜನಪ್ರತಿನಿಧಿಗಳಿಗೆ ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಆರ್‌ಟಿಇ ಮಕ್ಕಳ ಬಗ್ಗೆ ತಾರತಾಮ್ಯ ಮಾಡುವುದನ್ನು ಬಿಡಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳವರಿಗೆ ಎಚ್ಚರಿಕೆ ನೀಡಿ, ಈ ವರ್ಷ ಕಾಯ್ದೆಯ ಬಗ್ಗೆ ಎಲ್ಲಾ ವರ್ಗಗಳ ಜನ ಸಾಮಾನ್ಯರಿಗೆ ಅರಿವು ಮೂಡಿಸುವ  ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಸರ್ಕಾರದ ಹಮ್ಮಿಕೊಳ್ಳುತ್ತಿದೆ ಎಂದರು. ತಾಪಂ ಅಧ್ಯಕ್ಷ ಬಿ.ವಿ. ಕೃಷ್ಣಾರೆಡ್ಡಿ ಮಾತನಾಡಿ, ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಶಿಕ್ಷಣನೀಡುವ ಉದ್ದೇಶದಿಂದ ಇದರ ಬಗ್ಗೆ ಜನ ಪ್ರತಿನಿಧಿಗಳಿಗೆ  ಅರಿವು ಕಾರ್ಯಗಾರ ಆಯೋಜಿಸಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ. ರಾಘವೇಂದ್ರ, ಎಂ. ನಾಗರಾಜ್, ಪುರಸಭಾ ಸದಸ್ಯ ಮುಕ್ತಿಯಾರ್, ಕೆ.ಕೆ. ಮಂಜು, ಮಾತನಾಡಿದರು.  ಶಿವಪುರ ಗಣೇಶ್, ಇಸಿಒ ಶಂಕರ್, ಬಿಜೆಪಿ ಶಿವಣ್ಣ ಇದ್ದರು..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement