ಮೃತಪಟ್ಟ ನಾಲ್ವರು ಶಿಕ್ಷಕರಿಗೆ ಬಂಗಾರಪೇಟೆಯಲ್ಲಿ ಶ್ರದ್ಧಾಂಜಲಿ
ಬಂಗಾರಪೇಟೆ: ಕಳೆದ ಮಂಗಳವಾರ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಶಿಕ್ಷಕರಿಗೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶಿಕ್ಷಕ ವೃಂದದಿಂದ ಭಾವ ಪೂರ್ಣ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ನಂತರ ಮಾತನಾಡಿದ ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ನೌಕರರಿಗೆ ಯಾವುದೇ ಕಷ್ಟ ಎದುರಾದರೂ ತಕ್ಷಣ ಅದನ್ನು ಬಗೆಹರಿಸುವ ಚೈತನ್ಯ ಹೊಂದುವ ಮೂಲಕ ಎಲ್ಲರ ಮನ ಗೆದ್ದಿದ್ದರು. ಇಂತಹ ದೀಮಂತ ನಾಯಕ ಅಕಾಲಿಕ ಮರಣ ಹೊಂದಿರುವುದು ಇಡೀ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ ಮಾತನಾಡಿದರು. ಇದಕ್ಕೂ ಮೊದಲು ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೌಕರ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರಗೌಡ ನೌಕರರಿಗೆ ಮಾತ್ರ ನಾಯಕರಾಗಿರದೆ ಇಡೀ ಸಮಾಜಕ್ಕೆ ನಾಯಕರಾಗಿದ್ದರು ಎಂದು ಹೇಳಿದರು. ಇಒ ಕೆ.ಎಸ್. ಭಟ್, ಕಸಾಪ ಅಧ್ಯಕ್ಷ ಅಶ್ವಥ್, ಮಾಜಿ ಪೌರಾಧ್ಯಕ್ಷ ಕೆ. ಚಂದ್ರಾರೆಡ್ಡಿ, ಎಲ್. ರಾಮಕೃಷ್ಣ, ಬದರಿನಾಥ್, ಮಹೇಶ್, ರಾಜಪ್ಪ, ಯುವರಾಜು, ಅಪ್ಪಯ್ಯಗೌಡ ಇದ್ದರು.