ಮೃತಪಟ್ಟ ರಾಸುಗಳಿಗೆ ಪರಿಹಾರದ ಚೆಕ್ ವಿತರಣೆ
ಚಿಂತಾಮಣಿ: ಸರ್ಕಾರದಿಂದ ವಿತರಿಸುವ ಚೆಕ್ಕುಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಹೈನುಗಾರಿಕೆಯಲ್ಲಿ ಹೆಚ್ಚು ಅಭಿವೃದ್ಧಿ ಹೊಂದಬೇಕೆಂದು ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ ಪಶು ಸಂಗೋಪನಾ ಇಲಾಖೆ ಹಾಗೂ ಕೋಚಿಮಲ್‌ನಿಂದ ಕಾಲುಬಾಯಿ ಜ್ವರದಿಂದ ಮರಣ ಹೊಂದಿದ ರಾಸುಗಳ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದಿಂದ 15 ಸಾವಿರ ಹಾಗೂ ಕೋಮುಲ್‌ನಿಂದ 10 ಸಾವಿರ ಸೇರಿ ಪ್ರತಿ ರಾಸುಗೆ 25 ಸಾವಿರ ರು.ನಂತೆ ತಾಲೂಕಿನ 285 ಫಲಾನುಭವಿಗಳಿಗೆ 49 ಲಕ್ಷ 55 ಸಾವಿರ ಪರಿಹಾರ ಧನ ವಿತರಿಸಿದರು.
ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ತಾಪಂ ಅಧ್ಯಕ್ಷೆ ಗೌರಮ್ಮ ಮಾತನಾಡಿದರು. ತಾಪಂ ಉಪಾಧ್ಯಕ್ಷ ನಾಗರಾಜ್‌ಗೆ ಆಸನವಿಲ್ಲದೆ ಪರದಾಡಿದರು.