ವಿದ್ಯಾರ್ಥಿನಿ ಬೆದರಿಸಿ ಚಿನ್ನಾಭರಣ ಲೂಟಿ
ಕೋಲಾರ: ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಬೆದರಿಸಿ ಚಿನ್ನಾಭರಣ ದೋಚಿರುವ ಘಟನೆ ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ 3.30ರ ಸಮಯದಲ್ಲಿ ಸುಶ್ಮಿತಾ ಎಂಬುವರು ಕಾಲೇಜು ಮುಗಿಸಿಕೊಂಡು ಗ್ರಾಮದ ನೀಲಗಿರಿ ತೋಪಿನ ಮೂಲಕ ಮನೆ ಕಡೆಗೆ ಹೋಗುತ್ತಿದ್ದಾಗ 50 ವರ್ಷ ವಯಸ್ಸಿನ ಅಪರಿಚಿತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ಕತ್ತಿನಲ್ಲಿದ್ದ 5 ಗ್ರಾಂ ತೂಕದ ಚಿನ್ನದ ಸರ ಹಾಗೂ 4 ಗ್ರಾಂನ ಕಿವಿ ಓಲೆಯನ್ನು ಕಿತ್ತುಕೊಂಡು ಹೋಗಿದ್ದಾನೆಂದು ದೂರಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿಗಾಗಿ ಶೋಧನೆ ಕೈಗೊಂಡಿದ್ದಾರೆ.