ಸಿಡಿಲು ಬಡಿದು 30 ಮೇಕೆಗಳ ಸಾವು
ಬಂಗಾರಪೇಟೆ: ಸಿಡಿಲು ಬಡಿದು 30 ಮೇಕೆಗಳು ಮೃತಪಟ್ಟು ಒಂದೂವರೆ ಲಕ್ಷ ರು. ನಷ್ಟ ಉಂಟಾಗಿರುವ ಘಟನೆ ತಾಲೂಕಿನ ದೋಣಿಮಡಗು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಗ್ರಾಮದ ಗೋಪಾಲಪ್ಪ ಎಂಬುವರ ಮೇಕೆಗಳೇ ಸಿಡಿಲಿಗೆ ಬಲಿಯಾಗಿದ್ದು, ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಬಿರು ಮಳೆ ಬರುವ ವಾತಾವರಣವಿತ್ತು. ಈ ವೇಳೆ ರಭಸವಾಗಿ ಸಿಡಿಲು ಬಡಿಯಿತು. ಮೊದಲು ಗೋಪಾಲಪ್ಪ ಮನೆ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ನಾಶವಾಗಿದೆ. ನಂತರ ಪಕ್ಕದಲ್ಲೆ ಇದ್ದ ಮೇಕೆಗಳ ಶೆಡ್ಗೆ ಬಡಿದು ಒಳಗಿದ್ದ ಮೂವತ್ತು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ರೈತ ಗೋಪಾಲಪ್ಪನಿಗೆ ಸುಮಾರು ಒಂದೂವರೆ ಲಕ್ಷ ನಷ್ಟ ಉಂಟಾಗಿದೆ. ಪರಿಹಾರ ಕೊಡಿಸಬೇಕೆಂದು ಗೋಪಾಲಪ್ಪ ಕೋರಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಉಷಾರವರು ಭೇಟಿ ನೀಡಿ ಪರಿಶೀಲಿಸಿದರು.