ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ
ಕೋಲಾರ: ತಾಲೂಕಿನ ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಎಂ.ನಾರಾಯಣರೆಡ್ಡಿರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೆಶ್ ಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ಮಣಿಘಟ್ಟ ಸೊಣ್ಣೇಗೌಡರವರ ನೇತೃತ್ವದಲ್ಲಿ ಎಲ್ಲಾ ನಿರ್ದೇಶಕರು ಒಮ್ಮತದಿಂದ ಅಧ್ಯಕ್ಷರ ಆಯ್ಕೆಗೆ ಸಹಕರಿಸಿದರು. ನಿರ್ದೇಶಕರಾಗಿ ವೆಂಕಟರಾಮಪ್ಪ, ಜಿ. ಚಂದ್ರೇಗೌಡ, ರಾಮರೆಡ್ಡಿ, ಚಂಗಾರೆಡ್ಡಿ, ಪಿ.ಶ್ರೀನಿವಾಸಪ್ಪ, ಹನುಮಪ್ಪ, ರಾಮಚಂದ್ರಪ್ಪ, ಚೌಡಮ್ಮ, ವೆಂಕಟಮ್ಮ ರವರು ಆಯ್ಕೆಯಾಗಿರುತ್ತಾರೆ.
ಮಾಜಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಘುನಾಥರೆಡ್ಡಿ, ರಜನಿ, ವಿ.ವರದಪ್ಪ, ಶಿವಣ್ಣ, ಕಾರಹಳ್ಳಿ ಮುನಿಯಪ್ಪ, ರಾಜ, ವೆಂಕಟರಾಮಪ್ಪ, ರಾಮಚಂದ್ರಾರೆಡಿ ಇದ್ದರು.