ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಜಿಲ್ಲೆಯ ಆಟಗಾರರಿಗೆ ಜಯ
ಕೋಲಾರ: ಕೋಯಮತ್ತೂರಿನಲ್ಲಿ ನಡೆದ 35ನೇ ರಾಷ್ಟ್ರಮಟ್ಟದ ಮಾಸ್ಟರ್ಸ್ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೋಲಾರ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯಿಂದ ರಾಜ್ಯವನ್ನು ಪ್ರತಿನಿಧಿಸಿದ್ದ ಹದಿನೇಳು ಜನ ಕ್ರೀಡಾಪಟುಗಳ ತಂಡದಲ್ಲಿ ನಾಲ್ಕು ಜನ ಪದಕಗಳನ್ನು ಗೆದ್ದು ಜಿಲ್ಲೆಗ ಕೀರ್ತಿ ತಂದಿರುತ್ತಾರೆ. ಅಂತರರಾಷ್ಟ್ರೀಯ ಕ್ರೀಡಾಪಟು ವಿ.ಮಾರಪ್ಪ 60ರ ವಯೋವುತಿಯಲ್ಲಿ ಎತ್ತರ ಜಿಗಿತದಲ್ಲಿ ಮೊದಲನೇ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದು ಪದಕಗಳ ಸಂಖ್ಯೆಯನ್ನು 105ಕ್ಕೆ ಏರಿಸಿಕೊಂಡಿದ್ದಾರೆ. ಯಡಹಳ್ಳಿ ಹುಲಿಮರಿ ಮುನಿಶಾಮಯ್ಯ 75ವಯೋವುತಿಯಲ್ಲಿ 800ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, ಕ್ಯಾಸಂಬಳ್ಳಿ ಎಂ.ನಾರಾಯಣಮ್ಮ 55 ರ ವಯೋವುತಿಯಲ್ಲಿ 5 ಸಾವಿರ ಮೀಟರ್ ಓಟದಲ್ಲಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.
ಸಂಚಾರಿ ಪೇದೆ ಮಹಬೂಬ್‌ಗೆ ಸುವರ್ಣಶ್ರೀ ಪ್ರಶಸ್ತಿ
ಕೋಲಾರ: ಸಂಚಾರ ನಿರ್ವಹಣೆಯಲ್ಲಿ ಕೋಲಾರ ನಗರದಲ್ಲಿ ಉತ್ತಮ ಹೆಸರು ಗಳಿಸಿರುವ ನಗರದ ಸಂಚಾರಿ ಠಾಣೆ ಪೇದೆ ಬಿ.ಎನ್. ಮಹಬೂಬ್ ಅವರಿಗೆ ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಸುವರ್ಣ ಚಾರಿಟಬಲಲ್ಟ್ರಸ್ಟ್ ಸುವರ್ಣಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ನೆನಪಿನ ಕಾಣಿಕೆ ಹಾಗೂ ಉತ್ತಮ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಪದಕ ಸೇರಿದಂತೆ 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ.