ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಐದು ಮಂದಿ ಅಂತಾರಾಜ್ಯ ದರೋಡೆ ಕೋರರ ಬಂಧನ

Mainashree
Updated On : 2 Mar 2014, 11:01 am

ಬಂಗಾರಪೇಟೆ: ಐದು ಮಂದಿ ಅಂತಾರಾಜ್ಯ ದರೋಡೆ ಕೋರರನ್ನು ಮಾಲು ಸಮೇತ ಬಂಧಿಸುವಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಊತಂಗೆರೆ ತಾಲೂಕು ಕೊಂಡಪಟ್ಟಿ ಗ್ರಾಮದ ಎಂ. ದೇವನ್, ಎಂ. ವೆಂಕಟರಾಮ್, ಮುತ್ತುರಾಮ್, ವೆಂಕಟರಾಮನ್ ಹಾಗೂ ಕೃಷ್ಣನ್ ಬಂಧಿತ ಆರೋಪಿಗಳಾಗಿದ್ದು, ಕಳೆದ ನವೆಂಬರ್ 29ರಂದು ಬೇತಮಂಗಲ ಗ್ರಾಮದ ಗಂಟ್ಲರೆಡ್ಡಿ ಎಂಬುವರ ಮನೆಗೆ ನುಗ್ಗಿದ 9ಜನ ಡಕಾಯಿತರು ಮನೆಯವರನ್ನು ಬೆದರಿಸಿ 750 ಗ್ರಾಂ ಚಿನ್ನಾಭರಣಗಳು 6ಕೆಜಿ ಬೆಳ್ಳಿ ವಸ್ತುಗಳು ಮತ್ತು ಮೂರು ಲಕ್ಷ ಇಪ್ಪತ್ತುಸಾವಿರ ನಗದು ಸೇರಿದಂತೆ ಒಟ್ಟು 26ಲಕ್ಷ ರು.ಗಳನ್ನು ದೋಚಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಬೇಧಿಸಲು ಡಿವೈಎಸ್ಪಿ ಎ.ಕೆ. ವಿವೇಕಾನಂದರವರ ಮಾರ್ಗದರ್ಶನದಲ್ಲಿ ಸಿಪಿಐ ವೆಂಕಟಾಚಲಪತಿ ನೇತೃತ್ವದಲ್ಲಿ ಮಾರಿಕುಪ್ಪಂ ಪಿಎಸ್‌ಐ ಸೂರ್ಯ ಪ್ರಕಾಶ್, ಆಂಡರ್ ಸನ್ ಪೇಟೆ ಆಂಡನಪ್ಪ, ಉರಿಗಾಂ ಮಾರ್ಕಂಡಯ್ಯ ಮತ್ತು ನಾರಾಯಣಸ್ವಾಮಿ ಒಳಗೊಂಡ ಐದು ತಂಡವನ್ನು ರಚಿಸಲಾಗಿತ್ತು ಪ್ರಕರಣ ನಡೆದು ಮೂರು ತಿಂಗಳಲ್ಲೇ 9ಜನ ದರೋಡೆಕೋರರ ಪೈಕಿ ಐವರನ್ನು ಬಂಧಿಸಿ ಅವರಿಂದ 700 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳು ಬೇತಮಂಗಲ, ಬಳ್ಳಾರಿ, ಹೊಸದುರ್ಗ, ಮುಳಬಾಗಿಲು, ಆಂಧ್ರಪ್ರದೇಶದ ಪಲಮನೇರು, ವೇಂಪಲ್ಲಿ, ತಮಿಳುನಾಡಿನ ತಿರುನಲ್‌ಕೊಂಡಿ, ನಂಬಿಯಾರ್, ಸಕ್ಕಟೈ, ದಿಂಡಿಗಲ್, ತಿರುಪತ್ತೂರು, ದೇವಕಟ್ಟಿ, ಸೆಮೇನಾರ್ ಕೋಯಲ್, ಮನಪುರೈ, ತಿರುವಯೂರ್ ಸೇರಿದಂತೆ ಒಟ್ಟು 16 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು. ತಲೆ ಮರೆಸಿಕೊಂಡಿರುವ ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದ್ದು ಅತಿ ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಸೈಯದ್ ಉಲ್ಪತ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ಕೆಜಿಎಫ್ ಜಿಲ್ಲಾ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕೆಜಿಎಫ್ ಜಿಲ್ಲಾ ಪೊಲೀಸ್‌ನಲ್ಲಿ 2012ಕ್ಕಿಂತಲೂ 13ರಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು ಇದಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೇ ಕಾರಣವೆಂದು ಎಸ್ಪಿ ಡಾ. ರೋಹಿಣಿ ಕಟೋಚ್ ಹೇಳಿದರು. ಈ ವೇಳೆ ಡಿವೈಎಸ್ಪಿ ವಿವೇಕಾನಂದ, ಸಿಐ ವೆಂಕಟಾಚಲಪತಿ, ಎಸ್‌ಐ ಯೋಗಾನಂದ ಸೋನಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement