ಒತ್ತಡ ರಹಿತ ಜೀವನಕ್ಕೆ ಯೋಗ ಉತ್ತಮ ಶಿಕ್ಷಣ: ರಘುನಾಥ್
ಮಾಲೂರು: ಒತ್ತಡ ರಹಿತ ಜೀವನಕ್ಕೆ ಪಂತಂಜಲಿ ಯೋಗ ಉತ್ತಮ ಶಿಕ್ಷಣವಾಗಿದೆ ಎಂದು ಕೆಪಿಸಿಸಿ ಸದಸ್ಯ ರಘುನಾಥ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಚೆನ್ನಕೇಶವ ತಾಲೂಕು ದೈಹಿಕ ಶಿಕ್ಷಕರಿಗಾಗಿ ನೀಡಿದ ಟ್ರಾಕ್‌ಸೂಟ್ ವಿತರಿಸಿ ಮಾತನಾಡಿ, ಉತ್ತಮ ಸಂಕಲ್ಪಗಳು ಸಾಧ್ಯವಾಗಬೇಕಾದರೆ ಉತ್ತಮ ಆರೋಗ್ಯ-ಮಾನಸಿಕ ಒತ್ತಡ ರಹಿತ ವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣದ ಜತೆಯಲ್ಲಿ ಶಿಕ್ಷಕರು ಮನಸ್ಸು ನಿಗ್ರಹಿಸುವಂತಹ ಯೋಗಭ್ಯಾಸದ ಶಿಕ್ಷಣ ಪಡೆಯಬೇಕು ಎಂದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ದೇವರಾಜ್, ಕಾಂಗ್ರೆಸ್ ಯುವ ಜಿಲ್ಲಾ ಉಪಾಧ್ಯಕ್ಷ ಪಾಪರೆಡ್ಡಿ, ತಾಲೂಕು ಯುವ ಅಧ್ಯಕ್ಷ ಸುನೀಲ್, ಪ್ರಧಾನ ಕಾರ್ಯದರ್ಶಿ ಶಬ್ಬೀರ್, ಮುನಿನಾರಾಯಣ, ಬಲ್ಲಹಳ್ಳಿ ನಾರಾಯಣಸ್ವಾಮಿ, ದೈ.ಶಿ.ಸಂ.ಜಿಲ್ಲಾಉಪಾಧ್ಯಕ್ಷ ಶ್ರೀನಿವಾಸಯ್ಯ, ಎಂ. ನಾಗಪ್ಪ, ವಿಜೇಂದ್ರ, ಸುರೇಂದ್ರ, ಟಿ.ಕೆ. ಗೋವಿಂದೇಗೌಡ, ಸೂರ್ಯನಾರಾಯಣ, ಮಾ.ವೇ. ಪ್ರಕಾಶ್, ಶಿಕ್ಷಕ ಮುನಿರಾಜು ಇದ್ದರು.