ರೈಲಿಗೆ ಸಿಕ್ಕಿ ಮಹಿಳೆ ಸಾವು
ಬಂಗಾರಪೇಟೆ: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಪಟ್ಟಣದ ರೈಲ್ವೆ ನಿಲ್ದಾಣದ ಹೊರವಲಯದ ಐನೋರಹೊಸಹಳ್ಳಿ ಗ್ರಾಮದ ಸಮೀಪ ಭಾನುವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಬೂದಿಕೋಟೆ ಹೋಬಳಿಯ ಮಠಾರಿ ಹೊಸಹಳ್ಳಿ ಗ್ರಾಮದ ಮುನಿಯಪ್ಪ ಎಂಬುವರ ಪತ್ನಿ ಪಾಪಮ್ಮ70 ಎಂದು ಗುರುತಿಸಲಾಗಿದೆ. ಪಾಪಮ್ಮ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಲು ಬಂದಿದ್ದಾಳೆ. ನೇರವಾಗಿ ಆಸ್ಪತ್ರೆಗೆ ಹೋಗದೆ ಐನೋರಹೊಸಹಳ್ಳಿ ಗ್ರಾಮದ ರೈಲ್ವೆ ಹಳಿಗಳ ಮೇಲೆ ಹೋಗಿ ರೈಲಿಗೆ ತಲೆ ಕೊಟ್ಟಿದ್ದಾಳೆ. ಪೊಲೀಸರ ಪ್ರಕಾರ ಮೃತ ಪಾಪಮ್ಮಗೆ ಕಿವಿ ಮತ್ತು ಕಣ್ಣು ಅಷ್ಟಾಗಿ ಕಾಣುತ್ತಿಲ್ಲ ರೈಲ್ವೆ ಹಳಿ ದಾಟುವಾಗ ಘಟನೆ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.
ರೈಲು ಪ್ರಯಾಣಿಕ ಸಾವು: ಬೆಂಗಳೂರಿನಿಂದ ಕೆಜಿಎಪ್ಗೆ ಹೋಗುತ್ತಿದ್ದ ಮಾರಿಕುಪ್ಪಂ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಹೃದಯಾಘಾತದಿಂದ ರೈಲಿನಲ್ಲೇ ಮೃತಪಟ್ಟಿದ್ದಾನೆ. ರೈಲು ಪಟ್ಟಣಕ್ಕೆ ಬಂದಾಗ ಬೋಗಿಯಲ್ಲಿ ಅನಾಮದೇಯ ವ್ಯಕ್ತಿ ಮೃತಪಟ್ಟಿರುವುದು ಪತ್ತೆಯಾಯಿತು. ವಿಷಯ ತಿಳಿದು ರೈಲ್ವೆ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಟ್ಟಿದ್ದಾರೆ. ಮೃತನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.