ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತದಾನದ ಬಗ್ಗೆ ಅರಿವು ರ್ಯಾಲಿ

Vishwanath S
Updated On : 7 Mar 2014, 12:27 pm

ಕೆಜಿಎಫ್: ದೇಶದ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸಮರ್ಥ ನಾಯಕತ್ವಕ್ಕಾಗಿ ನೂರಕ್ಕೆ ನೂರು ಮತದಾನ ಮಾಡಲು ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಬಿವಿಪಿ ಹಮ್ಮಿಕೊಂಡಿತ್ತು.
ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ ನೇತೃತ್ವದಲ್ಲಿ ಬೇತಮಂಗಲ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು, ದಶಕಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಅಸಮರ್ಥ ಸರ್ಕಾರದಿಂದ ದೇಶದ ಅರ್ಥವ್ಯವಸ್ಥೆ ಶಿಥಲಗೊಂಡಿದೆ ಎಂದು ಆರೋಪಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿದು, ಕೊಳ್ಳುವ ಸಾಮಾರ್ಥ್ಯ ಕಳೆದುಕೊಂಡಿದ್ದು ಕೋಟ್ಯಂತರ ಯುವಕ ಯುವತಿಯರಿಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗವಕಾಶವಿಲ್ಲದೆ ಪರದಾಡುವಂತಾಗಿದೆ ಎಂದು ತಿಳಿಸುವ ಮೂವಕ ಅರಿವು ಮೂಡಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್, ಪಾಕಿಸ್ತಾನ, ಚೀನಾ, ಬಾಂಗ್ಲ ದೇಶದ ಸೈನಿಕರು, ಭಯೋತ್ಪಾದಕರು ದೇಶದ ಮೇಲೆ ನಿರಂತರ ಅತಿಕ್ರಮಣ ನಡೆಸುತ್ತಿದ್ದಾರೆ. ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಸೈನಿಕರ ಶಿರಚ್ಚೇದ ಮಾಡಿದ್ದರೂ ದೇಶದ ಅಡಳಿತ ಏನು ಮಾಡಲು ಮುಂದಾಗದೆ ಇರುವುದು ವಿಪರ್ಯಾಸ ಎಂದರು.
ರ್ಯಾಲಿಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಬಸವರಾಜ್, ಸುಬ್ರಮಣಿ, ಕಿರಣ್‌ಕುಮಾರ್, ವಿಶ್ವನಾಥ್, ವಿಜಯ್‌ಕುಮಾರ್, ವಿದ್ಯಾರ್ಥಿಗಳಾದ ಗಂಗಾಧರ್, ಪವಿತ್ರ, ಚೈತ್ರ, ಶೋಭಾ, ದಿವ್ಯ, ಪಾರ್ವತಿ, ಸುನಿಲ್, ಪರಮೇಶ್, ವಿನೋದ್, ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement