ಬ್ರಹ್ಮೋತ್ಸವದ ಪ್ರಯುಕ್ತ ಶಾಂತಿ ಸಭೆ
ಕೆಜಿಎಫ್: ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮೋತ್ಸವದ ಪ್ರಯುಕ್ತ ನಡೆಯುವ ಎಲ್ಲಾ ಉತ್ಸವಗಳ ಸಮಯದಲ್ಲಿ ಸಂಬಂಧಪಟ್ಟ ಸಮಿತಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೆಜಿಎಫ್ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ ತಿಳಿಸಿದರು.
ನಗರದ ಕಿಂಗ್ಜಾರ್ಜ್ಹಾಲ್ನಲ್ಲಿ ಏರ್ಪಡಿಸಿದ್ದ ಶಾಂತಿ ಸಮತಿ ಸಭೆಯಲ್ಲಿ ಮಾತನಾಡಿ, ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವಗಳು ಮೆರವಣಿಗೆ ನಡೆಸುವಾಗ ಸಂಬಂಧಪಟ್ಟ ಕಮಿಟಿಯ ಸ್ವಯಂಸೇವಕರು ಪೊಲೀಸ್ರೊಂದಿಗೆ ಸಹಕರಿಸಲು ಸನವಿ ಮಾಡಿದರು.
ನಂತರ ವಿವಿಧ ಉತ್ಸವ ಕಮಿಟಿ ಸದಸ್ಯರು ಮಾತನಾಡಿ, ವಿದ್ಯುತ್ ಅಡಚಣೆ, ರಸ್ತೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಬೇಕು ಮತ್ತು ಎಲ್ಲಾ ರೀತಿಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಬೆಸ್ಕಾಂ ಹಾಗೂ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ಪಿಎಸ್ಐಗಳಾದ ಎಲ್. ಆಂಜಪ್ಪ, ರಂಗಸ್ವಾಮಯ್ಯ, ಬೆಸ್ಕಾಂ ಇಲಾಖೆ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು ನಗರಸಭಾ ಅಧಿಕಾರಿಗಳು ಭಾಗವಹಿಸಿ ವಿವಿಧ ಉತ್ಸವಗಳ ಮಾಹಿತಿ ಪಡೆದೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.