ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ; ಮಕ್ಕಳಿಗೆ ಅನಾರೋಗ್ಯ

Vishwanath S
Updated On : 8 Mar 2014, 1:32 am

ಬಂಗಾರಪೇಟೆ: ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಡೆಯುತ್ತಿರುವ ವಸತಿ ಶಾಲೆ ಮಕ್ಕಳಿಗೆ ನಿತ್ಯ ಅನಾರೋಗ್ಯ ಕಾಡುತ್ತಿದ್ದರೂ ವಸತಿ ಶಾಲೆಯ ವಾರ್ಡನ್ ನಿಗಾವಹಿಸದಿರುವುದು ಪೋಷಕರನ್ನು ಕೆರಳುವಂತೆ ಮಾಡಿದೆ.
ಪಟ್ಟಣದ ಗೌತಮ್‌ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮಕ್ಕಳ ವಸತಿ ಶಾಲೆಯಲ್ಲಿ ಸಮಸ್ಯೆಗಳ ತಾಂಡವಾಡುತ್ತಿದೆ. ಆದರೂ ಮಕ್ಕಳು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂಬ ಅರಿವಿಲ್ಲದೆ ಕಾಲ ಕಳೆಯುವಂತಾಗಿದೆ.
ಈ ವಸತಿ ಶಾಲೆಯಲ್ಲಿ ಸುಮಾರು 70 ಮಕ್ಕಳಿದ್ದಾರೆ. ಆದರೆ ಮೂಲ ಸೌಲಭ್ಯಗಳಿಲ್ಲದೆ ಸೊರಗಿದೆ. ಕುಡಿಯಲು ನೀರಿಲ್ಲ, ಸೂಕ್ತ ಹಾಸಿಗೆಗಳಿಲ್ಲ, ರುಚಿಯಾದ ಊಟ ದೊರೆಯುವುದಿಲ್ಲ, ಇಲ್ಲಿ ವಾಸವಾಗುವ ಮಕ್ಕಳಿಗೆ ಅನಾರೋಗ್ಯ ಕಾಡಿದರೆ ನೋಡುವವರೇ ದಿಕ್ಕಿಲ್ಲ. ವಾರ್ಡನ್ ವರಲಕ್ಷ್ಮಿ ಮಕ್ಕಳ ಬಗ್ಗೆ ಕಾಳಜಿವಹಿಸುವುದಿಲ್ಲ ಬೆಳಗ್ಗೆ ಬಂದು ಹೋದರೆ ಮತ್ತೆ ಮರು ದಿನ ಬರುವರು. ಮಕ್ಕಳಿಗೆ ತೊಂದರೆಯಾದರೆ ದೇವರೇ ರಕ್ಷಿಸಬೇಕು. ಕಳೆದ ಹತ್ತು ದಿನಗಳಿಂದ 20 ಮಕ್ಕಳಿಗೆ ಅಲರ್ಜಿ, ಗಜ್ಜಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಜವಾಬ್ದಾರಿಯಿರುವ ವಾರ್ಡನ್ ಮಕ್ಕಳ ಬಗ್ಗೆ ನಿಗಾವಹಿಸಿಲ್ಲ. ಮಕ್ಕಳ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯವಹಿಸಿದ್ದಾರೆ. ವಸತಿ ಶಾಲೆಯಲ್ಲಿ ಅವ್ಯವಸ್ಥೆಗಳನ್ನು ಮೇಲಾಧಿಕಾರಿಗಳು ಸರಿಪಡಿಸುವತ್ತ ಗಮನಹರಿಸಬೇಕೆಂದು ಪೋಷಕರು ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement