ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಂತಾಮಣಿ ನಗರಸಭೆ ಗಾದಿ ಏರಲು ಕಸರತ್ತು

Vishwanath S
Updated On : 13 Mar 2014, 1:47 am

ಎನ್.ಬಾಬು
ಚಿಂತಾಮಣಿ: ಮಾ.19ರಂದು ಚಿಂತಾಮಣಿ ನಗರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ವರಿಷ್ಠರ ಮೇಲೆ ಒತ್ತಡ ಹಾಗೂ ಲಾಬಿ ತಂತ್ರಗಾರಿಕೆ ಹೆಚ್ಚಾಗುತ್ತಿರುವುದರಿಂದ ವಿಜಯಲಕ್ಷ್ಮಿ ಯಾರಿಗೆ ಒಲಿಯುವಳೋ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿಸಿದೆ.
ಜಿಲ್ಲೆಯಲ್ಲಿಯೇ ವಾಣಿಜ್ಯ ನಗರಿಯೆಂಬ ಖ್ಯಾತಿಗೆ ಒಳಪಟ್ಟಿರುವ ಚಿಂತಾಮಣಿ ನಗರಸಭೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕುಟುಂಬ ರಾಜಕಾರಣದ ಕಪಿಮುಷ್ಟಿಯಲ್ಲಿತ್ತು. ಆದರೆ, ಜೆಡಿಎಸ್ 16 ಸದಸ್ಯರು ಚುನಾವಣೆಯಲ್ಲಿ ಗೆದ್ದು ಬಹುಮತ ಗಳಿಸಿದ್ದಾರೆ. ಇದರ ಬೆನ್ನಲ್ಲೇ ಚಿಂತಾಮಣಿ ನಗರಸಭೆಯ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.
ಇದರಿಂದ ಕಳೆದ ಹಲವು ತಿಂಗಳಿಂದ ನಗರದ ಪ್ರಥಮ ಪ್ರಜೆ ಸ್ಥಾನಕ್ಕಾಗಿ ರೇಸ್‌ನಲ್ಲಿರುವ ಜಿಯಾವುಲ್ಲಾ ರೆಹಮಾನ್, ಅನ್ವರ್(ಅಣ್ಣು), 22ನೇ ವಾರ್ಡ್‌ನ ಸುಜಾತಮ್ಮ ಶಿವಣ್ಣ, ನಟರಾಜ್, ಶಫೀಕ್ ಉದ್ದೀನ್ ಹೆಸರುಗಳು ವರಿಷ್ಠರಲ್ಲಿ ಕೇಳಿ ಬರುತ್ತಿವೆ. ಈ ಪೈಕಿ ಜಿಯಾವುಲ್ಲಾ ರೆಹಮಾನ್ 4 ಬಾರಿ ನಗರಸಭಾ ಚುನಾವಣೆಗೆ ಸ್ಪರ್ಧಿಸಿ 3 ಬಾರಿ ಜಯಶೀಲರಾಗಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಅನ್ವರ್(ಅಣ್ಣು) 3 ಬಾರಿ ಸ್ಪರ್ಧಿಸಿ ಜಯಶೀಲರಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಇಬ್ಬರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
50-50 ನಿಯಮ: ಚಿಂತಾಮಣಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆ ಮಾಡಲು ಹ್ಯಾಟ್ರಿಕ್ ಸಾಧಿಸಿರುವ ಇಬ್ಬರು ಪ್ರಮುಖ ಆಕಾಂಕ್ಷಿಗಳಾದ ಜಿಯಾವುಲ್ಲಾ ರೆಹಮಾನ್, ಅನ್ವರ್(ಅಣ್ಣು) ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಧ್ಯಕ್ಷ ಹುದ್ದೆಗೆ ಮನವೊಲಿಸಲು ಈಗಾಗಲೇ ಪಕ್ಷದ ಹಿರಿಯ ಮುಖಂಡರೊಬ್ಬರು ಇರುವ ಕಾಲಾವಧಿಯಲ್ಲಿ ಇಬ್ಬರಿಗೂ ಸಮನಾಗಿ 50-50 ಆಡಳಿತವನ್ನು ನಡೆಸಲು ಚರ್ಚೆ ನಡೆಸಲಾಗಿದೆ. ಆದರೆ ಅಂತಿಮವಾಗಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಯವರ ಮನವೊಲಿಸಲು ಈಗಾಗಲೇ ಹಲವು ಹಿಂದುಳಿದ ಮುಖಂಡರು ಒತ್ತಡ ಹೇರುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement