ಜಿಲ್ಲಾ ಜೆಡಿಎಸ್ ಮಹಿಳಾಧ್ಯಕ್ಷರಾಗಿ ರಾಜೇಶ್ವರಿ ನೇಮಕ
ಕೋಲಾರ: ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಕೆ.ಆರ್. ರಾಜೇಶ್ವರಿ ಹರೀಶ್ಗೌಡ ಅವರು ನೇಮಕವಾಗಿದ್ದಾರೆ.
ಮಹಿಳಾ ಘಟಕದ ರಾಜಾಧ್ಯಕ್ಷೆ ಶೀಲಾ ನಾಯಕ್ ಅವರು ರಾಜೇಶ್ವರಿಯವರನ್ನು ಕೋಲಾರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದು ಪಕ್ಷದ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರು ಇದಕ್ಕೆ ಸಮ್ಮತಿಸಿ ಆದೇಶ ಪತ್ರವನ್ನು ಸೋಮವಾರ ನೂತನ ಅಧ್ಯಕ್ಷೆ ರಾಜೇಶ್ವರಿಯವರಿಗೆ ನೀಡಿದರು.
ಪಕ್ಷದ ಸಂಘಟನೆಗೆ ಹೆಚ್ಚಿನ ಹೆಚ್ಚಿನ ಸಮಯ ಮೀಸಲಿಟ್ಟು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಪ್ರಬಲವಾಗಿ ಕಟ್ಟುತ್ತೇನೆ. ಈವರೆಗೆ ಜೆಡಿಎಸ್ಗೆ ಮಹಿಳಾ ಅಧ್ಯಕ್ಷರ ನೇಮಕವಾಗಿರಲಿಲ್ಲ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಣ್ಣ, ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಹಾಗೂ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಶೀಲಾ ನಾಯಕ್ ಅವರ ಮಾರ್ಗದರ್ಶ ಹಾಗೂ ಜಿಲ್ಲಾ ಮುಖಂಡರ ಸಹಕಾರದಿಂದ ಜಿಲ್ಲೆಯಾಧ್ಯಂತ ಪ್ರವಾಸ ಮಾಡಿ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿಕೊಂಡು ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದೆಂದು ರಾಜೇಶ್ವರಿ ಕನ್ನಡಪ್ರಭಕ್ಕೆ ತಿಳಿಸಿದರು. ಏ.17ರಂದು ನಡೆಯುವ ಲೋಕಸಭಾ ಚುನಾವಣೆ ನಮ್ಮ ಪಕ್ಷಕ್ಕೆ ಆಗ್ನಿ ಪರೀಕ್ಷೆಯಾಗಿದೆ. ಜೆಡಿಎಸ್ ಸರ್ಕಾರವಿದ್ದಾಗ ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ವಿಷಯಗಳನ್ನು ಮಹಿಳೆಯರ ಮುಂದಿಟ್ಟು ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತೇನೆ. ಅತಿ ಶೀಘ್ರವೇ ಜಿಲ್ಲಾ ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡುವುದಾಗಿ ಹೇಳಿದರು.