ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೋಪಿ ಹಾಕುವುದರಲ್ಲೂ ನಿಸ್ಸೀಮ; ಮ್ಯಾಕ್ಸ್‌ವರ್ತ್ ಕಂಪನಿ ಮಾಜಿ ನೌಕರ ನರಸಿಂಹಯ್ಯ ಆರೋಪ

Vishwanath S
Updated On : 13 Mar 2014, 1:47 am

ಕೋಲಾರ: ಮ್ಯಾಕ್ಸ್‌ವರ್ತ್ ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಕರಾಗಿರುವ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೇಶವ ಅವರು ರೀಯಲ್ ಎಸ್ಟೇಟ್ ವ್ಯಾಪಾರದಲ್ಲಿ ಸಾಕಷ್ಟು ಜನರಿಗೆ ಟೋಪಿ ಹಾಕಿದ್ದು ಈಗ ಕೋಲಾರ ಜನರಿಗೆ ವಂಚಿಸಲು ಮುಂದಾಗಿದ್ದಾರೆಂದು ಕಂಪನಿಯ ಮಾಜಿ ನೌಕರ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಸುರದೇವನಹಳ್ಳಿಯ ಗ್ರಾ.ಪಂ. ಅಧ್ಯಕ್ಷ ಎಂ. ನರಸಿಂಹಯ್ಯ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ವ್ಯವಹಾರದಲ್ಲಿ ತಮಗೆ 80 ಲಕ್ಷ ರು. ಗಳನ್ನು ವಂಚಿಸಿದ್ದಾರೆ, ಇವರು ನೀಡಿರುವ ಚೆಕ್‌ಗಳನ್ನು ಬೌನ್ಸ್ ಆಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.
ರಾಜ್ಯದ ವಿವಿಧೆಡೆ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಆರೋಪ ಮ್ಯಾಕ್ಸ್‌ವರ್ತ್ ಕಂಪನಿಯ ಕೇಶವ ಅವರ ಮೇಲಿದ್ದು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆಂದು ದೂರಿದ ಅವರು ಮತದಾರರು ಈ ವ್ಯಕ್ತಿಯಿಂದ ವಂಚಿತರಾಗಬಾರದೆಂದು ತಿಳಿಸಿದರು.
ಕಳೆದ 2008 ರಿಂದ ಈವರೆಗೂ ರಾಜ್ಯದ ವಿವಿಧೆಡೆ ಜಮೀನುಗಳಿಗೆ ಮುಂಗಡ ಹಣ ನೀಡಿ ಕರಾರುಗಳನ್ನು ಮಾಡಿಕೊಂಡು ಸರ್ಕಾರದ ಅನುಮತಿ ಇಲ್ಲದೆ, ಬಡಾವಣೆಗಳನ್ನು ನಿರ್ಮಿಸಿ ಒಂದು ನಿವೇಶನವನ್ನು ಹಲವಾರು ಮಂದಿಗೆ ಮಾರಾಟ ಮಾಡುವ ಮೂಲಕ ದೊಡ್ಡ ದಂಧೆಯಲ್ಲಿ ನಿರತರಾಗಿರುವ ಕೇಶವ ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ರಾಜಕಾರಣಕ್ಕೆ ಬಂಡವಾಳವನ್ನಾಗಿ ಹಾಕಿ ಒಂದು ವೇಳೆ ಅಧಿಕಾರ ಸಿಕ್ಕಲ್ಲಿ ಜನರಿಗೆ ಇನ್ನಷ್ಟು ವಂಚನೆ ಮಾಡುವ ಯೋಜನೆಯನ್ನು ರೂಪಿಸಿಕೊಂಡು ಕೋಲಾರಕ್ಕೆ ಬಂದಿದ್ದಾರೆಂದು ಆರೋಪಿಸಿದರು.
ಯಲಹಂಕದ ಪೈಯಾಜ್ ಎಂಬುವರಿಂದ 7ಎಕರೆ ಜಮೀನು ಪಡೆದು 2.5 ಕೋಟಿ ರುಪಾಯಿ ನಾಮ ಹಾಕಿದ್ದಾರೆ. ಕೇಶವ ಅವರ ಮೇಲೆ ವಿವಿಧ ಭಾಗಗಳಲ್ಲಿ ಒಟ್ಟು 152 ಚೆಕ್‌ಬೌನ್ಯ್ ಪ್ರಕರಣಗಳು ದಾಖಲಾಗಿದೆ. ಇಂತಹ ವ್ಯಕ್ತಿ ಜೆಡಿಎಸ್‌ನಿಂದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವುದು ಅಘಾತಕಾರಿ ವಿಷಯವಾಗಿದೆ .ಇವರ ಬಗ್ಗೆ ಮತದಾರರು ಎಚ್ಚೆತುಕೊಂಡು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.
ನಿವೃತ್ತ ಅಧಿಕಾರಿ ನಾರಾಯಣಸ್ವಾಮಿರವರು ಮಾತನಾಡಿ 2009ರಲ್ಲಿ ಪತ್ರಿಕೆಯೊಂದರಲ್ಲಿ ಜಾಹೀರಾತು ಇರುವುದನ್ನು ಗಮನಿಸಿ ನಿವೇಶನ ಖರೀದಿಸಲು ಕೇಶವರವರಿಗೆ 2.5 ಲಕ್ಷ ರು. ನೀಡಿ ಕರಾರು ಮಾಡಿಕೊಂಡಿದ್ದರೂ ಸಹ ಅದನ್ನು ಯಾವುದೇ ನೋಟಿಸು ನೀಡದೆ ನನಗೆ ಗೊತ್ತು ಪಡಿಸಿದ್ದ ತಮಗೆ ಸೇರಿ 27 ಸಂಖ್ಯೆ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧವಾಗಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ 2011ರಲ್ಲೇ ದೂರು ದಾಖಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ವಿವರಿಸಿದರು. ಮತ್ತೊಬ್ಬ ಅರ್ಜಿದಾರ ಮುನಿರಾಜು,2011ರಲ್ಲಿ 2.10 ಗುಂಟೆ ಜಮೀನನ್ನು ಅಭಿವೃದ್ಧಿ ಪಡಿಸಲು ಎಕರೆಯೊಂದಕ್ಕೆ 14 ಲಕ್ಷ ರು.ಗಳನ್ನು ನೀಡಿದ್ದರೂ ಈವರೆಗೂ ಯಾವುದೇ ಅಭಿವೃದ್ಧಿ ಪಡಿಸಿಲ್ಲ. ಹಣ ಸಹ ರೈತರಿಗೆ ವಾಪಸ್ ನೀಡಿಲ್ಲವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement