ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಮಶಿವಯ್ಯಗೆ ಶ್ರದ್ಧಾಂಜಲಿ

Vishwanath S
Updated On : 13 Mar 2014, 1:47 am

ಬಂಗಾರಪೇಟೆ: ನೀರಾವರಿ ತಜ್ಞ ಡಾ.ಪರಮಶಿವಯ್ಯ ಹೃದಯಾಘಾತದಿಂದ ನಿಧರಾಗಿರುವುದು ಬಯಲುಸೀಮೆ ಜಿಲ್ಲೆಗಳ ಜನರಿಗೆ ಭಾರಿ ನಷ್ಟ ಉಂಟಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಸಭೆ ಸೇರಿ ಬಯಲು ಸೀಮೆ ಜಿಲ್ಲೆಗಳಲ್ಲಿ ಜನರು ಎದುರಿಸುತ್ತಿರುವ ನೀರಿನ ಬವಣೆ ನೀಗಿಸುವ ಸಲುವಾಗಿ ಅವರು ರೂಪಿಸಿರುವ ವರದಿ ಜಾರಿಗೆ ಮೊದಲೆ ನಿಧರಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ, ಪಶ್ಚಿಮಘಟ್ಟದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಣೆ ಮಾಡಿ ಆ ನೀರನ್ನು ಬಯಲು ಸೀಮೆಯ ಜನರಿಗೆ ನೀಡಲು ಪರಮಶಿವಯ್ಯನವರು ಯೋಜನೆ ರೂಪಿಸಿ ಕೊಟ್ಟಿದ್ದರು. ಆದರೆ ಸರ್ಕಾರಗಳು ಯೋಜನೆ ಜಾರಿಗೆ ತರಲು ಬದ್ಧತೆ ತೋರದೆ ಹಿರಿಯ ಚೇತನರ ಕನಸು ಭಗ್ನಗೊಳಿಸಿದ್ದಾರೆಂದು ಸಂಘಧ ಅಧ್ಯಕ್ಷ ರಾಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನಿಜಕ್ಕೂ ಬಯಲುಸೀಮೆ ಜನರ ಮೇಲೆ ಕಾಳಜಿಯಿದ್ದರೆ ಪರಮಶಿವಯ್ಯ ವರದಿ ಜಾರಿಗೊಳಿಸುವ ಮೂಲಕ ಅಗಲಿದ ಹಿರಿಯ ನೀರಾವರಿ ತಜ್ಞರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು.ಪರಮಶಿವಯ್ಯ ವರದಿಗೆ ಸರ್ಕಾರ ಕವಡೆ ಕಾಸಿನ ಬೆಲೆ ನೀಡದ ಕಾರಣ ಅವರು ನೊಂದಿದ್ದರು ಅವರು ಬದುಕಿದ್ದಾಗಲೆ ವರದಿ ಜಾರಿಗೊಳಿಸಿದ್ದರೆ ಅವರು ಖುಷಿಪಡುತ್ತಿದ್ದರು. ಆದರೆ ಸರ್ಕಾರ ಎತ್ತಿನ ಹೊಳೆ ಯೋಜನೆ ತಾರತುರಿಯಲ್ಲಿ ಅನುಷ್ಠಾನಗೊಳಿಸಲು ತೋರಿದ ಆಸಕ್ತಿ ಪರಮಶಿವಯ್ಯ ವರದಿ ಅನುಷ್ಟಾನಕ್ಕೆ ತೋರದೆ ಕಡೆಗಣಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದರು.
ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಮಾತನಾಡಿ ಶಾಶ್ವತ ನೀರಾವರಿಗಾಗಿ ಕಳೆದ 3 ದಶಕಗಳಿಂದ ನಿರಂತರ ಹೋರಾಟ ನಡೆಸಿದ ಪರಮಶಿವಯ್ಯ ನಿಧನರಾಗಿರುವುದು ಉಭಯ ಜಿಲ್ಲೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪವ್ಯಕ್ತಪಡಿಸಿ,ಸರ್ಕಾರ ಗೊಂದಲಗಳನ್ನು ಮೊದಲೇ ಬಗೆಹರಿಸಿ ಜಾರಿಗೆ ತರಲು ಮುಂದಾಗಿದ್ದರೆ ಪರಮಶಿವಯ್ಯ ತುಂಬಾ ಸಂತಸ ಪಡುತ್ತಿದ್ದರು ಮತ್ತು ಅವರ ವರದಿಗೆ ಸಾರ್ಥಕತೆ ಬಂತೆಲ್ಲ ಎಂದು ಸಂತೃಪ್ತಿಯನ್ನು ಅನುಭವಿಸುತ್ತಿದ್ದರು. ಆದರೆ ಇದಾಗದಿರುವುದು ದುರದೃಷ್ಟಕರ ಇನ್ನಾದರು ಸರ್ಕಾರ ಅವರ ವರದಿಯನ್ನು ಜಾರಿಗೊಳಿಸಿ ಅವರ ಆತ್ಮಕ್ಕೆ ನೆಮ್ಮದಿ ಸಿಗುವಂತೆ ಮಾಡಲಿ ಎಂದು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement