ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಳಬಾಗಲು ಪುರಸಭೆ ಅಧ್ಯಕ್ಷಉಪಾಧ್ಯಕ್ಷ ಗಾದಿಗೆ ದಳ ನಾಯಕಿಯರು

Vishwanath S
Updated On : 13 Mar 2014, 1:47 am

ಮುಳಬಾಗಲು: ಇಲ್ಲಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿಗಳು ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಈ ಬಾರಿ ಎರಡು ಸ್ಥಾನಗಳನ್ನೂ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು. ಅಧ್ಯಕ್ಷರಾಗಿ ಷಹೀನ್‌ತಾಜ್ ಮತ್ತು ಉಪಾಧ್ಯಕ್ಷರಾಗಿ ದಿವ್ಯಾಶ್ರೀ ಆಯ್ಕೆಯಾದರು. 27 ಸದಸ್ಯ ಸ್ಥಾನಗಳಲ್ಲಿ 11 ಪಕ್ಷೇತರರು, 11 ಜೆಡಿಎಸ್, 4 ಕಾಂಗ್ರೆಸ್ ಹಾಗೂ ಒಬ್ಬ ಬಿಜೆಪಿ ಸದಸ್ಯರಿದ್ದಾರೆ.
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತ್ರಿವೇಣಿ ನಾಮಪತ್ರ ಸಲ್ಲಿಸಿ ಬೆಂಬಲಿಸುವ ಸದಸ್ಯರ ಕೊರತೆಯ ಕಾರಣವಾಗಿ ನಾಮಪತ್ರ ವಾಪಸ್ ಪಡೆದರು. ಜೆಡಿಎಸ್‌ನಲ್ಲೂ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದ ಕಾರಣ ಮಧ್ಯಾಹ್ನ 2 ಗಂಟೆಗೆ ನಡೆಯಬೇಕಾದ ಆಯ್ಕೆಪ್ರಕ್ರಿಯೆಯನ್ನು ಸಂಜೆ 4 ಗಂಟೆಗೆ ಮುಂದೂಡಲಾಯಿತು. ಜೆಡಿಎಸ್‌ನವರು ಅಲಂಗೂರು ಜೋಡಿಗೆ ಹೋಗಿ ತಾಲೂಕು ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಕಣದಲ್ಲಿರಿಸಲು ನಿರ್ಧರಿಸಿದರು. ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಕೆ. ಏಕೇಶ್‌ಬಾಬು ಕಾರ್ಯ ನಿರ್ವಹಿಸಿದರು.
ಫಲಿತಾಂಶ ಬಂದ ಕೂಡಲೆ ಪಟಾಕಿ ಸಿಡಿಸಿ ಹರ್ಷಿಸಲಾಯಿತು. ನಂತರ ನಡೆದ ವಿಜಯೋತ್ಸವದಲ್ಲಿ ಜೆಡಿಎಸ್ ಮುಖಂಡರಾದ ಕೆ.ವಿ.ಶಂಕರಪ್ಪ, ಅಲಂಗೂರು ಶಿವಣ್ಣ, ತೇಜೋರಮಣ, ಎಂ.ಆರ್.ಮುರಳಿ, ಶ್ಯಾಮೇಗೌಡ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement