ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

7 ಎಕರೆ ಮಾವು, 2 ಎಕರೆ ನೀಲಗಿರಿ ತೋಪು ಬೆಂಕಿಗೆ ಆಹುತಿ

Vishwanath S
Updated On : 15 Mar 2014, 1:25 am

ಟೇಕಲ್: ಟೇಕಲ್ ತೊರಲಕ್ಕಿ ರಸ್ತೆಯಲ್ಲಿನ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಶಾಂತಮ್ಮ ವೆಂಕಟಸ್ವಾಮಿ ಅವರಿಗೆ ಸೇರಿದ 7 ಎಕರೆ ಮಾವಿನ ಹಾಗೂ 2 ಎಕರೆ ನೀಲಗಿರಿ ತೋಪು ಶುಕ್ರವಾರ ಮಧ್ಯಾಹ್ನ ಸಂಪೂರ್ಣ
ಬೆಂಕಿಗೆ ಆಹುತಿಯಾಗಿದೆ.
ರಸ್ತೆ ಸಮೀಪವಿರುವ ಸುಮಾರು 9 ಎಕರೆ ಪ್ರದೇಶದಲ್ಲಿ ಅತೀ ಹೆಚ್ಚು ಮಾವಿನ ಮರಗಳಲ್ಲಿ ಕಾಯಿ ಬಿಟ್ಟಿದ್ದು ಬಿಸಿಲಿನ ತಾಪಮಾನ ಹೆಚ್ಚಿದ್ದು ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕೋಲಾರದಿಂದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಅವರು ಬರುವ ಹೊತ್ತಿಗೆ ತೋಪು ಶೇಕಡ 80 ಭಾಗದಷ್ಟು ಸುಟ್ಟು ಭಸ್ಮವಾಗಿತ್ತು. ಇದರಿಂದ 2 ಲಕ್ಷ ರುಗಳಿಗೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಶಾಂತಮ್ಮನವರ ಮಗ ಗೋಪಾಲಕೃಷ್ಣ ತಿಳಿಸಿದ್ದಾರೆ. ಸ್ಥಳಕ್ಕೆ ಟೇಕಲ್ ಹೊರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement