ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾವೆಲ್ಲಾ ಚೆನ್ನಾಗಿರಲು, 30 ನಿಮಿಷಗಳ ಮೀಸಲಿಡಿ ಪ್ಲೀಸ್..

Vishwanath S
Updated On : 15 Mar 2014, 1:24 am

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಮತದಾರರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಗೊಳ್ಳುತ್ತಿರುವ ನಾನಾ ರೀತಿಯ ಕಸರತ್ತುಗಳು ತೀವ್ರಗೊಳ್ಳುತ್ತಿವೆ. ಈ ಮೂಲಕ ಪ್ರತಿಪಕ್ಷಗಳ ಲೋಪದೋಷಗಳನ್ನು ಬಿಂಬಿಸುವ ಮೂಲಕ ಮತವನ್ನು ಯಾಚಿಸಲಾಗುತ್ತಿದೆ.
ನಗರದಲ್ಲಿ ಡಿವೈಎಫ್‌ಐ ವಿನೂತನವಾಗಿ ನಾವೆಲ್ಲಾ  ಚೆನ್ನಾಗಿರಲು, ಮೂವತ್ತು ನಿಮಿಷಗಳ ಮೀಸಲಿಡಿ ಪ್ಲೀಸ್  ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಗಮನ ಸೆಳೆಯಿತು.
 ಮತದಾನದ ಹಕ್ಕನ್ನು ಚಲಾಯಿಸುವ ಮುನ್ನಾ ಸಮಗ್ರವಾಗಿ ಸತ್ಯಾಂಶಗಳನ್ನು ತಿಳಿದುಕೊಂಡು ಅರ್ಹರಿಗೆ ಮತವನ್ನು ಚಲಾಯಿಸಬೇಕು. ಇದಕ್ಕಾಗಿ ಮೂವತ್ತು ನಿಮಿಷಗಳ ಬಿಡುವು ಮಾಡಿಕೊಂಡು ಸಮರ್ಪಕವಾಗಿ ಪುಸ್ತಕವನ್ನು ಓದಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಈ ಪುಸ್ತಕದ ಮೂಲಕ ಮನವಿ ಮಾಡಲಾಯಿತು. ಪುಸ್ತಕದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸ್ವಾರ್ಥ ರಾಜಕಾರಣ,  ಆಮ್ ಆದ್ಮಿ ಪಕ್ಷದ ವೈಭವೀಕರಣ, ಸಿಪಿಎಂ ಜನಪರ ನಿಲುವು, ಪ್ರಾದೇಶಿಕ ಸಮಸ್ಯೆಗಳು ಸೇರಿದಂತೆ ಪ್ರಮುಖ ಅಂಶಗಳು ಲಿ ಅಡಗಿವೆ. ಸುಮಾರು 10 ಲಕ್ಷ ಕ್ಕೂ ಹೆಚ್ಚು ಮುದ್ರಣಗೊಂಡಿರುವ ಪುಸ್ತಕವನ್ನು ಕ್ಷೇತ್ರದಾದ್ಯಂತ ಜನರಿಗೆ ಹಂಚಿ ಜಾಗೃತಿ ಮೂಢಿಸಲಾಗುತ್ತಿದೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ನ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರ ಮೂರ್ತಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಒಂದೇ ನಾಣ್ಯದ ಎರಡು ಮುಖಗಳು. ಕೇವಲ ಅಧಿಕಾರವನ್ನು ಹಿಡಿಯುವುದು ಮಾತ್ರ ಈ ಪಕ್ಷಗಳ ಗುರಿಯಾಗಿವೆ. ಇನ್ನೂ ಆಮ್ ಆದ್ಮಿ ಪಕ್ಷ ಬಡವರ ಪರ ಮತ್ತು ಭ್ರಷ್ಟಾಚಾರಿ ವಿರೋಧಿ ಎಂದು ಬಿಂಬಿಸಿಕೊಳ್ಳುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಹೋರಾಟವನ್ನು ನಡೆಸುತ್ತ ಜನರ ಟೀಕೆಗೆ ಗುರಿಯಾಗುತ್ತಿವೆ ಎಂದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ವ್ಯಾಪಕ ಭ್ರಷ್ಟಾಚಾರವನ್ನು ನಡೆಸಿ ಕೋಟ್ಯಂತರ ರೂಗಳನ್ನು ಲೂಟಿ ಮಾಡಿರುವುದೇ ದೊಡ್‌ಡ ಸಾಧನೆ.ಇದನ್ನು ಜವಾಬ್ದಾರಿಯುತವಾಗಿ ಪ್ರಶ್ನಿಸಬೇಕಾದ ಬಿಜೆಪಿ ಸಹ ಮೌನಕ್ಕೆ ಶರಣಾಗಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಯತ್ನಿಸಿತು. ಇದರಿಂದ ಕಾಂಗ್ರೆಸ್ಪ್‌ಕ್ಷವನ್ನು ತಿರಸ್ಕರಿಸಿ, ಬಿಜೆಪಿಯನ್ನು ಸೋಲಿಸಬೇಕು. ಬಹುಮತದ ಸರ್ಕಾರ ರಚನೆಯಾಗಬಾರದೆಂಬ ದುರುದ್ದೇಶದಿಂದ ಸ್ವಾರ್ಥ ರಾಜಕಾರಣವನ್ನು ಮಾಡುವ ಜೆಡಿಎಸ್ ಪಕ್ಷವನ್ನು ಜನರು ನಂಬಲೇ ಬಾರದು ಎಂದರು. ಬಯಲು ಸೀಮೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದು ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳಿಂದ ಈ ಭಾಗದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟಗಳ ಮೂಲಕ ಸ್ಪಂದಿಸುವ ವರಿಗೆ ಚುನಾವಣೆಯಲ್ಲಿ ಬೆಂಬಲವನ್ನು ನೀಡಬೇಕು. ಇದಕ್ಕೆ ಮತದಾರರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದ ಅವರು, ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಜನರು ಗುರುತಿಸಬೇಕು. ಇನ್ನೂ ಹೆಚ್ಚಿಗೆ ಹೋರಾಟವನ್ನು ನಡೆಸಲು ಶಕ್ತಿ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಸಂಘಟನೆಯ ಮುಖಂಡರಾದ ಶಿವಪ್ಪ, ದೇವರಾಜ್, ಕೃಷ್ಣಾರೆಡ್ಡಿ, ಹೇಮಚಂದ್ರ, ಜಬೀವುಲ್ಲಾ,  ಸದಾನಂದ, ನರಸಿಂಹಯ್ಯ, ರಾಜು, ಫಯಾಜ್, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement