ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ
ಶಿಡ್ಲಘಟ್ಟ: ತಾ. ಚಿಕ್ಕದಾಸರಹಳ್ಳಿ ಗುಟ್ಟದ ಮೇಲಿರುವ ಶ್ರೀ ಭೂನೀಳ ಸಮೇತ ಶ್ರೀ ಬ್ಯಾಟರಾಯಸ್ವಾಮಿ 82ನೇ ಬ್ರಹ್ಮರಥೋತ್ಸವ ಪಾಂಚರಾತ್ರಾಗಮ ರೀತ್ಯಾ ಮಾ.14 ರಿಂದ ಮಾ.20 ರವರೆಗೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಕಮಿಟಿ ಕೋರಿದೆ.
ಮಾ.15 ಶನಿವಾರ ಸುಪ್ರಭಾತಸೇವೆ, ಹೋಮಾದಿಗಳು, ಅಭೀಷೇಕ, ಅಲಂಕಾರ, ಕಲ್ಯಾಣೋತ್ಸವ, ಗರುಡೋತ್ಸವ, ಹನುಮಂತೋತ್ಸವ, ಗಜೇಂದ್ರಮೋಕ್ಷ, ಸ್ವಾಮಿಯ ಬ್ರಹ್ಮರತೋತ್ಸವಕ್ಕೆ ಶೇಷವಾಹನ.
ಭಾನುವಾರ ಹುಣ್ಣಿಮೆ ಬೆಳ್ಳಿಗ್ಗೆ ಸುಪ್ರಭಾತಸೇವೆ ಅಭಿಷೇಕ ಮತ್ತು ಅಲಂಕಾರ, ಬೆಳಿಗ್ಗೆ ಬ್ರಹ್ಮರಥ ಕಳಶಾಸ್ಥಾಪನೆ, ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಅಭಿಸೇಕ, ಹೂವಿನ ಅಲಂಕಾರ, ಪ್ರಸಾದದ ಸೇವೆ, ವಿಶೇಷವಾಗಿ ಬ್ರಹ್ಮರಥ ಹೋಮಾದಿಗಳು ಹಾಗೂ ಪೂಣರಾಹುತಿ ಸೇವೆ, ಮದ್ಯಾಹ್ನ ಸಿದ್ದೆರಬೆಟ್ಟ ಶ್ರೀಕ್ಷೇತ್ರ ಭಾಳೆಹೊನ್ನೂರು ಶಾಖಾ ಮಠ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಧ್ಯದಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ.
ಬ್ರಹ್ಮರಥೋತ್ಸವ ಪ್ರಯುಕ್ತ ವೀರಗಾಸೆ, ರಾತ್ರಿ ಭಕ್ತಪ್ರಹ್ಲಾದ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿರುತ್ತದೆ. ಹುಟ್ಲೋತ್ಸವ ಧೂಳೋತ್ಸವ.
ಸೋಮವಾರ ಬೆಳಿಗ್ಗೆ ಸೂರ್ಯಮಂಡಲೋತ್ಸವ ಅಭಿಷೇಕ ಮತ್ತು ಸಂತರ್ಪಣೆ, ಸ್ವಾಮಿಗೆ ಹೂವಿನ ಅಲಂಕಾರ ಮತ್ತು ಮೋಹಿನಿ ಉತ್ಸವ, ರಾತ್ರಿ ಪಲ್ಲಕ್ಕಿ ಉತ್ಸವ. ಮಂಗಳವಾರ ಅಶ್ವವಾಹ ನೋತ್ಸವ ಇತ್ಯಾದಿ ನಡೆಯಲಿದೆ.