18,407 ಹೊಸ ಮತದಾರರ ಸೇರ್ಪಡೆ
ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ. 17
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 18,407 ಹೊಸ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.17ರಂದು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಕೈಗೊಂಡಿರುವ ಪೂರ್ವ ಸಿದ್ದತೆ ಕುರಿತು ವಿವರ ನೀಡಿದರು.
ಕ್ಷೇತ್ರದಲ್ಲಿ ಕಳೆದ ಜ.31ರ ವೇಳೆಗೆ ಮತಪಟ್ಟಿಯಲ್ಲಿ 14, 62, 438 ಮತದಾರರಿದ್ದರು, 18,407 ಹೊಸ ಮತದಾರರು ಸೇರಿ 14,88,845 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2041 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಕ್ಷೇತ್ರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಹೊಸ ಮತದಾರರು ಸೇರಿ ಒಟ್ಟು 1,85,287 ಹಾಗೂ ಚಿಂತಾಮಣಿಯಲ್ಲಿ ಹೊಸಬರು ಸೇರಿ 1,94,724 ಮತದಾರರು ಇದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು?: ಶ್ರೀನಿವಾಸಪುರ-1,94,637, ಮುಳಬಾಗಿಲು-1,82,582, ಕೆಜಿಎಫ್-1,73,180,ಬಂಗಾರಪೇಟೆ-1,76,571,ಕೋಲಾರ-2,03,715,
ಮಾಲೂರು ವಿಸ ಕ್ಷೇತ್ರದಲ್ಲಿ-1,68,149 ಸೇರಿದಂತೆ ಒಟ್ಟು ಮತದಾರರು 14,75,763 ಇದ್ದಾರೆ.
ಮತದಾನ ಕೇಂದ್ರಗಳ ವಿವರ: ಜಿಲ್ಲೆಯಲ್ಲಿ 1563 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಶಿಡ್ಲಘಟ್ಟ, ಂತಾಮಣಿ ಸೇರಿ 478 ಮತ ಕೇಂದ್ರ ಸೇರಿ ಒಟ್ಟು 2014 ಕೇಂದ್ರ ಸ್ಥಾಪಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳ 1563 ಮತಗಟ್ಟೆಗಳ ಪೈಕಿ 333 ಅತಿ ಸೂಕ್ಷ್ಮ, 338 ಸೂಕ್ಷ್ಮ ಹಾಗೂ 889 ಸಾಮಾನ್ಯ ಮತಗಟ್ಟೆಗಳು, ಹಾಗೂ ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿ ಕ್ರಮವಾಗಿ 34 ,74 ಅತಿ ಸೂಕ್ಷ್ಮ,85,96 ಸೂಕ್ಷ್ಮ,ಹಾಗೂ 111,78 ಸಾಮಾನ್ಯ ಮತಗಟ್ಟೆಗಳು ಇದ್ದು ಈ ಮತಗಟ್ಟೆಗಳಿಗೆ ಅಗತ್ಯಕ್ಕೆ ತಕ್ಕಂತೆ ಮೈಕ್ರೋ ವೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರಿ ನೌಕರರನ್ನು ಮೈಕ್ರೂ ಅಬ್ಸರ್ವರ್ಗಳನ್ನಾಗಿ ನೇಮಿಸಿಕೊಂಡು ಚುನಾವಣಾ ವೀಕ್ಷಕರಿಗೆ ಸಹಾಯ ಕಲ್ಪಿಸಲಾಗುತ್ತಿದೆ. ಸುಮಾರು 1200 ಮೈಕ್ರೋ ವೀಕ್ಷಕರು ದೈನಂದಿನ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆಂದು ವಿವರಿಸಿದರು.
ಅಡ್ಡಿಪಡಿಸಿದರೆ ಶಿಸ್ತುಕ್ರಮ: ಮತದಾರರಿಗೆ ಹಕ್ಕು ಚಲಾಯಿಸಲು ಯಾರಾದರೂ ಅಡ್ಡಿ ಉಂಟು ಮಾಡಿದರೆ ತಕ್ಕಶಾಸ್ತಿ ಮಾಡಲಾಗುತ್ತದೆ, ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಮತ ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಒಂದು ವೇಳೆ ಯಾರಿಗಾರೂ ಮತದಾನ ಮಾಡಲು ಇಷ್ಟವಿಲ್ಲದಿದ್ದಲ್ಲಿ ಅದಕ್ಕೆ ಪೂರಕವಾದ ಅರ್ಜಿಯಲ್ಲಿ ಸಹಿ ಮಾಡಿ ಮತದಾನದಿಂದ ದೂರ ಸರಿಯಲು ಅವಕಾಶ ಉಂಟು. ಆದರೆ, ತನಗೆ ಇಷ್ಟವಿಲ್ಲವೆಂದು ಬೇರೆಯರ ಹಕ್ಕು ಕಸಿಯಲು ಇಲ್ಲವೇ ಅಡ್ಡಿ ಉಂಟು ಮಾಡಿದಲ್ಲಿ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಹಾಯವಾಣಿಗೆ ಕರೆ ಮಾಡಲು, ಜಿಲ್ಲಾಧಿಕಾರಿ ಕಚೇರಿಯ ದೂ-0852-222711, ಕೋಲಾರ ತಾಲೂಕು ಕಚೇರಿ-221270, ಬಂಗಾರಪೇಟೆ-08153-254555, ಮಾಲೂರು-08151-232699, ಮುಳಬಾಗಿಲು-08159-242049, ಶ್ರೀನಿವಾಸಪುರ-08157-246222 ಹಾಗೂ ಕೆಜಿಎಫ್-08153-271674ಗೆ ಕರೆ ಮಾಡಬಹುದು.
ಜಿಪಂ ಸಿಇಒ ವಿನೋದ್ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ ಬದನೂರು, ಮಾಧ್ಯಮ ವಿಭಾಗ ಸಂಚಾಲಕ, ಜಿಲ್ಲಾ ಹಿರಿಯ ಸಹಾಯಕ ವಾರ್ತಾಧಿಕಾರಿ ರಂಗಾರೆಡ್ಡಿ, ಚುನಾವಣಾ ಶಾಖೆ ಅಧಿಕಾರಿ ರಾಘವೇಂದ್ರರಾವ್ ಇದ್ದರು.