ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಆಹಾರ ಭದ್ರತೆ ಕಲ್ಪಿಸುವಲ್ಲಿ ಯುಪಿಎ ವಿಫಲ'

Mainashree
Updated On : 18 Mar 2014, 1:08 am

ಚಿಂತಾಮಣಿ: ಕೇಂದ್ರ ಯುಪಿಎ ಸರ್ಕಾರ ಜನಸಾಮಾನ್ಯರಿಗೆ ಆಹಾರ ಭದ್ರತೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲಗೊಂಡಿರುವುದಾಗಿ ಡಿವೈಎಫ್‌ಐನ ಜಿಲ್ಲಾ ಸಂಚಾಲಕ ಕೃಷ್ಣಾರೆಡ್ಡಿ ಆರೋಪಿಸಿದರು.
ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್ ಪಕ್ಕದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಡಿವೈಎಫ್‌ಐ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದರು. 16ನೇ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡಲು ಹೊರಟಿರುವುದು ಸರಿಯಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಆಹಾರ ಭದ್ರತೆಯಿಲ್ಲದೆ ದೇಶ ಆಘಾತಕಾರಿ ಪರಿಸ್ಥಿತಿ ಎದುರಿಸುವಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು. ಗುಜರಾತ್ ಮಾದರಿಯಲ್ಲೇ ಅಭಿವೃದ್ಧಿ ಮಾಡುತ್ತೇನೆಂದು ಹೇಳುವ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರಮೋದಿ ಮಾಧ್ಯಮಗಳು ಬಿಂಬಿಸುತ್ತಿರುವುದು ಸರಿಯಷ್ಟೇ. ಕೋಮುವಾದಿ ಬಿಜೆಪಿವನ್ನು ಜನರು ತಿರಸ್ಕರಿಸುತ್ತಾರೆಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳಿದ್ದಂತೆ. ದೇಶದಲ್ಲಿನ ಬಡತನ, ಅಸ್ಪೃಶ್ಯತೆ ನಿರ್ಮೂಲನೆ ಮಾಡುವಲ್ಲಿ 2 ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ವಿಫಲಗೊಂಡಿದೆಯೆಂದು ಹೇಳಿದರು.  ಕಾರ್ಯಕ್ರಮಕ್ಕೂ ಮುನ್ನ ಡಿವೈಎಫ್‌ಐ ವತಿಯಿಂದ 16ನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುವಜನ ಬಂದುಗಳನ್ನು ಅರಿವು ಮೂಡಿಸುವ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ನಂತರ ಸಭೆಯಲ್ಲಿ ನೀರಾವರಿ ತಜ್ಞ ದಿ. ಡಾಜಿ.ಎಸ್.ಪರಶಿವಯಯ್ಯನವರ ನಿಧನಕ್ಕೆ ಒಂದು ನಿಮಿಷದ ಕಾಲ ಮೌನ ಆಚರಿಸಲಾಯಿತು.  ಡಿವೈಎಫ್‌ಐ ಉಪಾಧ್ಯಕ್ಷ ರಾಮು, ಕಾರ್ಯದರ್ಶಿ ನರಸಿಂಹ, ಶ್ರೀನಿವಾಸ್ ಯಾದವ್, ಖಜಾಂಚಿ ರಾಜು, ಮುಖಂಡರಾದ ಸೀನಾ, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement