'ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ'
ಬಂಗಾರಪೇಟೆ: ಇಂದಿನ ಕಂಪ್ಯೂಟರ್ ಯುಗದಲ್ಲಿ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದ್ದು, ಶಾಲೆಗಳಲ್ಲೇ ಈ ಶಿಕ್ಷಣವನ್ನು ನೀಡಲು ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ಉಚಿತವಾಗಿ 35ಸಾವಿರ ಮೌಲ್ಯದ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಗಿದೆ ಎಂದು ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕ ಗೋಪಾಲಕೃಷ್ಣ ತಿಳಿಸಿದರು.
ಶಾಲೆಗೆ ಕಂಪ್ಯೂಟರ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್ಬಿಐ ಕಂಪ್ಯೂಟರ್ಗಳನ್ನು ಶಾಲೆಗಳಿಗೆ ನೀಡಿ, ಕಂಪ್ಯೂಟರ್ ಜ್ಞಾನ ಮೂಡಿಸಲು ಮುಂದಾಗಿದೆ ಎಂದರು. ಗ್ರಾಮೀಣ ಮಕ್ಕಳು ದಾನಿಗಳಿಂದ ಸಿಗುವ ಹಲವು ಅನುಕೂಲ ಬಳಸಿಕೊಂಡು ಉತ್ತಮ ಸ್ಥಾನಕ್ಕೇರಿ ಮುಂದೆ ಯಾರ ಹಂಗಿಲ್ಲದೆ ಸ್ವಾವಲಂಬಿಗಳಾಗಿ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು
ಪ್ರಾಂಶುಪಾಲ ಶಂಕರಯ್ಯ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಹೊಗ್ಗರಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.