ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿವಿಜಿ ಜಯಂತಿಗೆ ಪತ್ರಕರ್ತರ ಗೈರು!

Mainashree
Updated On : 18 Mar 2014, 1:08 am

ಕ.ಪ್ರ. ವಾರ್ತೆ, ಕೋಲಾರ, ಮಾ.17
ಕಾರ್ಯನಿರತ ಪತ್ರಕರ್ತರ ಸಂಘದ ಹುಟ್ಟಿಗೆ ಕಾರಣಕರ್ತರು, ಮಂಕುತಿಮ್ಮನ ಕಗ್ಗ ಮಹಾಕಾವ್ಯವನ್ನು ರಚಿಸಿ ಕನ್ನಡ ಸಾರಸ್ವತ ಲೋಕದ ಕೀರ್ತಿ ಹೆಚ್ಚಿಸಿದ ಮಹಾನ್ ಸಾಹಿತಿ ದೇವನಹಳ್ಳಿ ವೆಂಕಟರಾಮಯ್ಯ ಗುಂಡಪ್ಪ(ಡಿವಿಜಿ) 127ನೇ ಜಯಂತಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ದಿನವನ್ನಾಗಿ ಆಚರಿಸಲಾಯಿತು.
ರಾಜ್ಯದ ಗಡಿಭಾಗ ಹಾಗೂ ಮುಡಣ ದಿಕ್ಕಿನಲ್ಲಿರುವ ಮುಳಬಾಗಿಲು ಪಟ್ಟಣದಲ್ಲಿ ಅಲ್ಲಿನ ಪತ್ರಕರ್ತರು ಅಪೂರ್ಣವಾಗಿ ಆಚರಿಸಬೇಕಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾ ಸಂಘವು ಜವಾಬ್ದಾರಿ ಹೊತ್ತು ನಡೆಸಿತಾದರೂ ಪತ್ರಕರ್ತರಿಗಿಂತ ವಿದ್ಯಾರ್ಥಿಗಳು ಹಾಗೂ ಡಿವಿಜಿ ಸಾಹಿತ್ಯ ಆರಾಧಿಸುವ ಅಭಿಮಾನಿಗಳೇ ಹೆಚ್ಚಾಗಿ ಸೇರಿದ್ದರು.
ನಗೆಪಾಟಲಿಗೆ: ಸಂಘದ ಸದಸ್ಯರು ಇರಲಿ ಪದಾಧಿಕಾರಿಗಳು ಸಹ ಕಾರ್ಯಕ್ರಮಕ್ಕೆ ಬಾರದೆ ಇರುವುದು ನಗೆಪಾಟಲಿಗೆ ಗುರಿಯಾಗಿದೆ. ಇತ್ತೀಚೆಗೆ ರಾಜಕೀಯ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರು ಕರೆದ ಪತ್ರಿಕಾಗೋಷ್ಠಿಗೆ ಕೋಲಾರದವರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಕಡೆಗಳಿಂದಲೂ ಸುಮಾರು 60ಕ್ಕೂ ಹೆಚ್ಚು ಪತ್ರಕರ್ತರು ಹಾಜರಿದ್ದರು.  
ಡಿವಿಜಿ ಒಬ್ಬ ಪತ್ರಕರ್ತರಾಗಿ ಸಮಾಜದ ಸುಧಾರಣೆಗಾಗಿ ನೀಡಿರುವ ಕೊಡುಗೆ ಅಪಾರ. 1932ರಲ್ಲೇ ಅವರು ಮೈಸೂರು ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸಿ ಸಮಾಜಕ್ಕಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರದಿಂದ ಕನಿಷ್ಟ ಸವಲತ್ತು ನೀಡಬೇಕೆಂದು ಹೋರಾಡಿದವರು,
ಇದರ ಫಲವಾಗಿಯೇ ಸರ್ಕಾರ ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಇನ್ನಿತರ ಸೌಕರ್ಯ ನೀಡಲು ಉದ್ದೇಶಿಸಿದೆ. ಸಂಘದ ಸದಸ್ಯರಾಗಿ ಎಲ್ಲಾ ಸವಲತ್ತುಗಳು ಬೇಕೆಂದು ಹಕ್ಕು ಚಲಾಯಿಸುವ ಕೋಲಾರ ಜಿಲ್ಲೆಯ ಪತ್ರಕರ್ತರು ನಮ್ಮ ಜಿಲ್ಲೆಯವರೇ ಆದ ಡಿವಿಜಿಯ ಜನ್ಮ ಜಯಂತಿ ದಿನ ಕನಿಷ್ಟ ಅರ್ಧ ಗಂಟೆ ಸಮಯ ನೀಡಿ ಗೌರವ ಸಲ್ಲಿಸದೆ ಇರುವುದು ಮಾಧ್ಯಮ ಕ್ಷೇತ್ರಕ್ಕೆ ಮಾಡಿದ ಅಪಮಾನವಂದೇ ಭಾವಿಸಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement