ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಯಿಗಳ ದಾಳಿ: 7 ಕುರಿ ಸಾವು

Mainashree
Updated On : 18 Mar 2014, 1:07 am

ಗೌರಿಬಿದನೂರು: ನಾಯಿಗಳ ಹಠಾತ್ ದಾಳಿಯಿಂದ 7 ಕುರಿಗಳು ಸತ್ತಿದ್ದು, 3 ಕುರಿಗಳಿಗೆ ತೀವ್ರ ಗಾಯವಾಗಿರುವ ಘಟನೆ ತೊಂಡೇಬಾವಿ ಹೋಬಳಿ ಬೆಳಚಿಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಬೆಳಚಿಕ್ಕನಹಳ್ಳಿಯ ನಿವಾಸಿ ತಿಮ್ಮಾರೆಡ್ಡಿ ಎಂದಿನಂತೆ ತನ್ನ ಮನೆ ಎದುರಿನ ಕುರಿ  ಕೊಪ್ಪಲಿನಲ್ಲಿ ಕುರಿಗಳನ್ನು ಬೆಳಗ್ಗೆ ಮೇಯಿಸಲು ಬಂದು ನೋಡಿದಾಗ ಕುರಿಗಳ ಮೇಲೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. 7 ಕುರಿಗಳು ಸತ್ತಿದ್ದು, 3 ಗಾಯಗಳಾಗಿದ್ದು, ಕುರಿಗಳನ್ನು ಸ್ಥಳದಲ್ಲಿಯೇ ತಿಂದಿದ್ದು, ಮತ್ತೆ ಕೆಲವನ್ನು ಸಾಯಿಸಿದೆ ಎಂದು ಅಲವತ್ತುಕೊಂಡಿದ್ದಾರೆ.
ಈ ಘಟನೆಯಿಂದ ಕಂಗಾಲಾಗಿರುವ ರೈತ ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದು ಸರ್ಕಾರ ಬಡರೈತನಾದ ನನಗೆ ಸೂಕ್ತ ಸಹಾಯ ಮಾಡಬೇಕೆಂದು ಕೋರಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement