ವಿಜೃಂಭಣೆಯ ತಾತಯ್ಯನವರ ರಥೋತ್ಸವ
ಚಿಂತಾಮಣಿ: ತ್ರಿಕಾಲಜ್ಞಾನಿ, ವರಕವಿ, ಕೈವಾರದ ಸಾಧಕ ಸಂತ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಇದಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಭಕ್ತರು ತೇರು ಬಾಳೆಹಣ್ಣನ್ನು ತೇರಿಗೆ ಅರ್ಪಿಸಿ ಹರಕೆ ಸಲ್ಲಿಸಿದರು. ಭಜನೆಯಲ್ಲಿ ಭಕ್ತರು ಪರಾಕಾಷ್ಠೆಯಲ್ಲಿ ಮಿಂದು ಮುಳುಗಿದರು. ರಥೋತ್ಸವಕ್ಕೆ ತಾತಯ್ಯನವರ ಭಕ್ತರು ಆಂಧ್ರ ತಮಿಳುನಾಡು ಮುಂತಾದ ಕಡೆಗಳಿಂದ ಸಾವಿರಾರು ಆಗಮಿಸಿ, ಭಜನೆಗಳನ್ನು ಮಾಡಿದರು.
ರಥೋತ್ಸವದ ಅಂಗವಾಗಿ ಸದ್ಗುರು ಯೋಗಿನಾರೇಯಣ ತಾತಯ್ಯನವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರು ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷಗಳೊಂದಿಗೆ ಅಷ್ಠಾವದಾನ ಸೇವೆ ಸಮರ್ಪಿಸಲಾಯಿತು.