ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ಅಗತ್ಯ: ಗಣೇಶ್

Mainashree
Updated On : 19 Mar 2014, 12:20 pm

ಕೋಲಾರ: ಕವಿತೆಗಳು ಸತ್ವವಾಗಬೇಕಾದರೆ ಕವಿಗೋಷ್ಠಿಗಳನ್ನು ಏರ್ಪಡಿಸಿ ಕವಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.  
ನಗರದ ರೋಟರಿ ಕ್ಲಬ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾ ಸಿರಿಗನ್ನಡ ವೇದಿಕೆ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ಅಗತ್ಯವಾಗಿರುವುದರಿಂದ ಸಂಘ ಸಂಸ್ಥೆಗಳು ಮುಂದೆ ಬಂದು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೋಲಾರ ಜಿಲ್ಲೆಯು ಬರಡು ಜಿಲ್ಲೆಯಾದರೂ ಇಲ್ಲಿ ಕವಿತೆಗಳಿಗೆ ಬರವಿಲ್ಲ. ಅನೇಕ ಕವಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇಂಥ ಕವಿಗಳಿಗೆ ಚುಟುಕು ಸಾಹಿತ್ಯ ಪರಿಷತ್ತು ಮಾಡಿಕೊಡಬೇಕೆಂದರು.
ವಕೀಲ ಹಾಗೂ ಕವಿ ವೆಂಕಟಾಚಲಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಕವಿಗಳು ಸರ್ಕಾರಿ ನೌಕರರಾಗಿದ್ದು ಬಿಡುವಿನ ವೇಳೆಯಲ್ಲಿ ಸಮಯ ಉಪಯೋಗಿಸಿಕೊಂಡು ಕವಿತೆಗಳನ್ನು ರಚನೆ ಮಾಡುತ್ತಿರುವುದು ಶ್ಲಾಘನೀಯ. ಕವಿಗಳು ಎತ್ತರಕ್ಕೆ ಬೆಳೆಯಲು ಕವಿಗಳ ಒಕ್ಕೂಟ ಅತ್ಯಗತ್ಯ ಎಂದರು.
ಪೊಲೀಸ್ ಅಧಿಕಾರಿ ಸೋಮಶೇಖರ್, ದಾನಿ ಕೆ.ಎಸ್.ನಾಗೇಶ್ ಮಾತನಾಡಿದರು.
ಡಾ. ಕೆ.ಎಂ.ಜೆ.ಮೌನಿ, ಪೋಸ್ಟ್‌ನಾರಾಯಣಸ್ವಾಮಿ, ಸೀಕಲ್ ನರಸಿಂಹಪ್ಪ, ಲಕ್ಷ್ಮಯ್ಯ, ವೆಂಕಟಸ್ವಾಮಿ, ಜಿ.ಟಿ.ರಾಮಚಂದ್ರಪ್ಪ, ಡಾ. ರಾಧಾಪ್ರಕಾಶ್, ಸರಣಪ್ಪ ಗಬ್ಬೂರ, ಟಿ.ಎಂ.ನಾಗರಾಜ್ ಮುಂತಾದವರು ಕವನ ವಾಚನ ಮಾಡಿದರು.
ತಿಮ್ಮಸಂದ್ರ ನಾಗರಾಜ್ ನಿರೂಪಿಸಿ, ಶರಣಪ್ಪ ಗಬ್ಬೂರ ಸ್ವಾಗತಿಸಿ, ಲಕ್ಷ್ಮಯ್ಯ ವಂದಿಸಿದರು. ವಿಶ್ವಯೋಗ ಸಂಕೀರ್ತನಾ ಸೇವಾ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement