ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಗ್ಗವನ್ನು ಸರಳೀಕರಿಸಬೇಕಿದೆ: ಪ್ರೊ. ನಂಗಲಿ

Mainashree
Updated On : 19 Mar 2014, 12:21 pm

ಮಾಲೂರು: ಮುಂದಿನ ತಲೆಮಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಸರಳೀಕರಿಸಿ ಮುದ್ರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಸಾಹಿತಿ ಪ್ರೊ.ನಂಗಲಿ ಚಂದ್ರಶೇಖರ್ ಹೇಳಿದರು.
ಅವರು ಸ್ಥಳೀಯ ಕಸಾಪ ಸಹಕಾರದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಹಿತಿ ಡಿ.ವಿ.ಗುಂಡಪ್ಪ ಅವರ 128ನೇ ಜಯಂತಿ ಹಾಗೂ ಕಗ್ಗದರ್ಶನದಲ್ಲಿ ಮಾತನಾಡಿದರು.
ಹಿಂದಿನ ಝನ್ಯಾಸಕ-ಶಿಕ್ಷಕರು ಕಲಿತ ಭೋದನಾ ವಿಷಯಗಳ ಜತೆ ಸಾಹಿತ್ಯದ ಜ್ಞಾನ ಸಹ ಹೊಂದಿರುತ್ತಿದ್ದರು. ಹಳೆಗನ್ನಡ ಕ್ಲಿಷ್ಟಕರವಾಗುತ್ತಿರಲಿಲ್ಲ. ಆದರೆ ಇಂದಿನ ಪೀಳಿಗೆಗೆ ಹಳೆಗನ್ನಡ ಅರ್ಥ ಮಾಡಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಮಂಕುತಿಮ್ಮನ ಕಗ್ಗವನ್ನು ಸರಳೀಕರಿಸಿ ಪ್ರಕಟಿಸುವುದು ಅವಶ್ಯವಾಗಿದೆ. ತಮ್ಮ ಮನಸ್ಸಿಗೆ ತಕ್ಕ ಅಭಿಪ್ರಾಯ ನೀಡುವ ಮಂಕುತಿಮ್ಮನ ಕಗ್ಗವು ಕನ್ನಡ ಸಾಹಿತ್ಯದ ಕಾಮಧೇನುವಾಗಿದೆ. ಶೈಕ್ಷಣಿಕವಾಗಿ ಪ್ರಸಿದ್ಧವಾಗದಿದ್ದರೂ ಜನಸಾಮಾನ್ಯರಿಗೆ ಹತ್ತಿರವಾಗಿ ಜನತಾ ಪಠ್ಯ ಪುಸ್ತಕವಾಗಿ ಎಲ್ಲರನ್ನೂ ಸೆಳೆದಿದೆ ಎಂದರು.
ಅಧ್ಯಾಪಕ ಸಿ.ಬಿ.ವೀರಭದ್ರಾಚಾರಿ ಮಾತನಾಡಿ, ಎಂದಿಗೂ ಮೋಸ ಮಾಡದ ಸ್ನೇಹಿತ ಎಂದರೆ ಅದು ಪುಸ್ತಕಗಳಾಗಿದ್ದು, ಅದರಲ್ಲೂ ಡಿವಿಜಿ ಅವರ ಸಾಹಿತ್ಯಗಳು ಅತ್ಯುತ್ತಮ ಸ್ನೇಹಿತರಾಗಲಿವೆ ಎಂದರು.
ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕುಂ.ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾ ಗೌರವಾಧ್ಯಕ್ಷ ಅಶ್ವಥ್ ರೆಡ್ಡಿ, ಉಪನ್ಯಾಸಕ ಶಿವಮೂರ್ತಿ ಮಾತನಾಡಿದರು. ಮೀನಾ ಕುಮಾರಿ ಇದ್ದರು. ಕಸಾಪ ಪ್ರ.ಸಂಚಾಲಕ ಡಿ.ಎಂ. ವೆಂಕಟೇಶ್ ಪ್ರಸ್ತಾವಿಕ ಮಾತನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement