ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳಿಗೆ ಸಾಹಿತ್ಯ ಅಧ್ಯಯನ ಅವಶ್ಯಕ: ಡಾ.ರಮೇಶ್‌ಬಾಬು

Mainashree
Updated On : 19 Mar 2014, 12:20 pm

ಕೋಲಾರ: ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳು ಕೇವಲ ವೈಜ್ಞಾನಿಕ ಅಧ್ಯಯನಕ್ಕೆ ಸೀಮಿತರಾಗದೆ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸಿ ಅಭ್ಯಾಸಿಸಬೇಕು. ಸಾಹಿತ್ಯ ಸಂಸ್ಕೃತಿ ದೇಶದ ಅವಿಭಾಜ್ಯ ಅಂಗವಾಗಿದ್ದು, ಸಾಹಿತ್ಯ ಮನಸ್ಸಿಗೆ ಮುದ ನೀಡುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ರಮೇಶ್‌ಬಾಬು ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಕಿರಿಯ ಮಹಿಳಾ ತರಬೇತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ.ವಿ. ಗುಂಡಪ್ಪ ಜನ್ಮದಿನಾಚರಣೆ ಅಂಗವಾಗಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕಷ್ಟವನ್ನು ಬದಿಗೊತ್ತಿ ಸಂತೋಷವನ್ನು ಬೇರೆಯವರಿಗೆ ಹಂಚುವ ಸಾಹಿತ್ಯವನ್ನು ಸಮಾಜಕ್ಕೆ ನೀಡಿದ ಗುಂಡಪ್ಪಅವರು ದೇಶ ಕಂಡ ಅತ್ಯುತ್ತಮ ಪತ್ರಕರ್ತರಾಗಿದ್ದರೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮುನಿರಾಜು ಬಣ್ಣಿಸಿದರು.
ಪ್ರಯೋಗಾಲಯ, ವಿಜ್ಞಾನ ಆಸ್ಪತ್ರೆಗಳಲ್ಲಿ ಶುಶ್ರೂಷಕಿಯರು ತಾವು ಕಾಣುವ ಸತ್ಯವನ್ನು ಬೆಳಕು ಚೆಲ್ಲುವ ಕವಿತೆ ರಚಿಸಬೇಕೆಂದು ತರಬೇತಿ ಕೇಂದ್ರದ ಪ್ರಾಂಶುಪಾಲರೂ ಆದ ಜಿಲ್ಲಾ ಆರೋಗ್ಯ ನೌಕರರ ಸಂಘದ ಅಧ್ಯಕ್ಷ ವಿಜಯಮ್ಮ ಹೇಳಿದರು.
ರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಕೆ.ಆರ್.ಪ್ರಭಾಕರ್, ವೃತ್ತಿ ಜೀವನವನ್ನು ಪ್ರೀತಿಸಬೇಕು, ಗೌರವಿಸಬೇಕು ಆಗ ಮಾತ್ರ ವೃತ್ತಿಯ ಪಾವಿತ್ರ್ಯತೆ ಕಾಪಾಡಲು ಸಾಧ್ಯವೆಂದರು.
ಅಧ್ಯಕ್ಷತೆ ವಹಿಸಿದ್ದ ಜಿ. ಶ್ರೀನಿವಾಸ್ ಮಾತನಾಡಿ, ಹಾಸ್ಯದ ಹೊನಲಿಂದ, ನವಿರಾಗಿ ಮತ್ತು ಸಮಾಜದ ಮೇಲೆ ಅಭಿವೃದ್ಧಿಯ ಪರಿಣಾಮ ಬೀರುವ ಲೇಖನ, ಚುಟುಕುಗಳು ವಿದ್ಯಾರ್ಥಿಗಳಿಂದ ಮೂಡಿಬರಬೇಕು ಎಂದರು.
ಉತ್ತಮ ಚುಟುಕುಗಳಿಗಾಗಿ, ಕೆ.ಎಸ್. ಲಲಿತಾ, ಅಮಲ, ಆಶಾಶ್ರೀ, ಮಾದವಿ, ಶಿಲ್ಪ, ಸುಜಾತ, ಜ್ಞಾನದೀಪ, ಭಾರ್ಗವಿ, ಸ್ಮಿತ, ರೂಪ, ಚೈತ್ರ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಡಿವಿಜಿ ಅವರ ಅಂಚೆಚಿತ್ರ ಪ್ರದರ್ಶಿಸಿ ಅವರ ಜೀವನ ಸಾಧನೆ ಎಲ್ಲರಿಗೂ ಆದರ್ಶ ಎಂದು ಚುಟುಕು ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷ ವಿ.ಪಿ. ಸೋಮಶೇಖರ್ ಹೇಳಿದರು. ಅಧ್ಯಾಪಕಿ ನಂದಿನಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪಿ.ನಾರಾಯಣಪ್ಪ ಇದ್ದರು. ಲಲಿತಾ ಸ್ವಾಗತಿಸಿ, ಭಾರ್ಗವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement