ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ; ಪ್ರತಿಭಟನೆ

Mainashree
Updated On : 20 Mar 2014, 12:29 pm

ಚಿಂತಾಮಣಿ: ಅಡುಗೆ ಅನಿಲವನ್ನು ವಿತರಕರು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಬಳಕೆದಾರರು ರಸ್ತೆಯಲ್ಲೇ ಖಾಲಿ ಸಿಲಿಂಡರ್‌ಗಳನ್ನು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಗರದಲ್ಲಿ ನಡೆಯಿತು.
ನಗರದ ಪಟಾಲಮ್ಮ ದೇವಾಲಯದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಇಲ್ಲಿನ ಅಡಿಗೆ ಅನಿಲ ಗ್ರಾಹಕರ ಪರದಾಟ ಕೇಳುವರೇ ಇಲ್ಲವೆಂದು ಆರೋಪಿಸಿ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ನಗರದ ಬಾಗೇಪಲ್ಲಿ ವೃತ್ತದ ಬಳಿ ಇರುವ ಗ್ಯಾಸ್ ವಿತರಕರ ಕಚೇರಿಯಲ್ಲಿ ಮಧ್ಯವರ್ತಿಗಳು ರಾಜಾರೋಷವಾಗಿ ನಗರದ ವಿವಿಧ ಹೊಟೇಲ್, ಬೇಕರಿ, ಅಂಗಡಿಗಳಿಗೆ ಅಡಿಗೆ ಅನಿಲವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಡಿಗೆ ಅನಿಲಕ್ಕಾಗಿ ನಿತ್ಯ ಬೆಳಗಿನ ಜಾವ 5 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುವ ಮಹಿಳೆಯರು, ವೃದ್ಧರು, ವಿಕಲಾಂಗರು, ನೌಕರರು ಕೊನೆಗೂ ಅಡಿಗೆ ಅನಿಲ ಸಮರ್ಪಕವಾಗಿ ದೊರೆಯದೆ ಪರದಾಡುತ್ತಿದ್ದಾರೆ. ವಿತರಕರು ಆನ್‌ಲೈನಲ್ಲಿ ಬುಕ್ ಮಾಡಿ, ನಾಳೆ ಬನ್ನಿ ಇತರೆ ಸಬೂಬುಗಳನ್ನು ಹೇಳಿ ಸಾಗಹಾಕುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.  ಇನ್ನು ಮುಂದಾದರೂ ಸಂಬಂಧಪಟ್ಟ ವಿತರಕರು ಮತ್ತು ಅಧಿಕಾರಿಗಳು ಜನಸಾಮಾನ್ಯರ ಜೊತೆ ಚೆಲ್ಲಾಟವಾಡದೆ ಸಮಯಕ್ಕೆ ಸರಿಯಾಗಿ ಗ್ಯಾಸ್ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement