ಗಾಂಜಾ ಮಾರಾಟ; ವ್ಯಕ್ತಿ ಬಂಧನ
ಬಂಗಾರಪೇಟೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ಕಾಮಸಮುದ್ರ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ತಾಲೂಕಿನ ಐಮಾಸಾಪುರ ಗ್ರಾಮದ ನಾರಾಯಣರೆಡ್ಡಿ ಎಂಬಾತ ಬಂಧಿತ ಆರೋಪಿಯಾಗಿದ್ದು, ಆರೋಪಿ ಆಂಧ್ರಪ್ರದೇಶದಿಂದ ಗಾಂಜಾ ತಂದು ತಮಿಳುನಾಡಿನ ಹಲವು ಪ್ರದೇಶಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಚಿಕ್ಕಕಳಂವಚಿ ಗ್ರಾಮದಲ್ಲಿ ಗಾಂಜಾ ಇಟ್ಟಿಕೊಂಡಿರುವ ಬಗ್ಗೆ ಕಾಮಸಮುದ್ರ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಸುಮಾರು ಒಂದೂವರೆ ಕೆಜಿ ಹತ್ತು ಸಾವಿರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪಿಎಸ್ಐ ವಸಂತ್ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿದ್ದಾರೆ.