ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೌರಿಬಿದನೂರು ಪುರಸಭೆ ಕಾಂಗ್ರೆಸ್‌ಗೆ

Mainashree
Updated On : 20 Mar 2014, 12:35 pm

ಗೌರಿಬಿದನೂರು: ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
19ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಜೆಡಿಎಸ್, 5 ಮಂದಿ ಬಿಜೆಪಿ ಸದಸ್ಯ ಬಲ ಹೊಂದಿದ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ನರಸಿಂಹಮೂರ್ತಿ ಅಧ್ಯಕ್ಷರಾಗಿ, ಚಿದಾನಂದಗುಪ್ತ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟಿದ್ದರೂ ವಿಧಾನಸಭಾ ಉಪಾಧ್ಯಕ್ಷರಾದ ಎನ್.ಎಚ್.ಶಿವಶಂಕರರೆಡ್ಡಿಯವರ ಮಧ್ಯಸ್ಥಿಕೆಯಲ್ಲಿ ಯುವ ಮುಖಂಡರಾದ ಎಂ.ನರಸಿಂಹಮೂರ್ತಿ ಹೆಸರನ್ನೇ ಅಂತಿಮಗೊಳಿಸಲಾಯಿತು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ನೂತನ ಅಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ಒಟ್ಟುಗೂಡಿಸಿಕೊಂಡು ಜನರ ಸೇವೆ ಮಾಡಬೇಕೆಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ನೂತನ ಅಧ್ಯಕ್ಷ ನರಸಿಂಹಮೂರ್ತಿ ಅವರನ್ನು ಅವರ ಅಭಿಮಾನಿಗಳು ಮೆರವಣಿಗೆ ನಡೆಸಿದರು.
 ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಂಗ್ರೆಸ್‌ನ ಹಿರಿಯ ಮುಖಂಡರು, ವಾಣಿಜ್ಯೋದ್ಯಮಿಗಳಾದ ಎಸ್.ಎ. ಅಶ್ವತ್ಥನಾರಾಯಣಶೆಟ್ಟಿ, ಬಿ.ಆರ್.ಶ್ರೀನಿವಾಸಮೂರ್ತಿ, ಜಿ.ವಿ.ಕೃಷ್ಣಮೂರ್ತಿ, ಜಿಪಂ ಸದಸ್ಯರಾದ ಕೇಶವರೆಡ್ಡಿ, ಮರಳೂರು ಪ್ರಕಾಶರೆಡ್ಡಿ, ಮಾರ್ಕೆಟ್ ರಾಮು, ಬಿ.ಜಿ.ವೇಣುಗೋಪಾಲ್, ಜಿ.ಕೆ.ಸತೀಶ್, ಅಬ್ದುಲ್ಲಾ, ವೆಂಕಟರಮಣ, ವೇಲದವೇಣಿ, ರಾಜು ಮುಂತಾದವರು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement