ಚಿಂತಾಮಣಿ: ತುಳಸಿಗೆ ಅವಿರೋಧ
ಚಿಂತಾಮಣಿ: ಏಕೈಕ ಮಹಿಳಾ ನಗರಸಭೆ ಸದಸ್ಯರಾದ ಕಾಂಗ್ರೆಸ್‌ನ ಎನ್.ತುಳಸಿ ರವಿ ಅವರಿಗೆ ನಗರಸಭೆ ಉಪಾಧ್ಯಕ್ಷ ಸ್ಥಾನ ಒಲಿದಿದೆ.
ನಗರಸಭೆಯಲ್ಲಿ ಖಾಲಿಯಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಚಿಕ್ಕಬಳ್ಳಾಪುರದ ನಾಗರಾಜಶೆಟ್ಟಿ ಕಾರ್ಯ ನಿರ್ವಹಿಸಿದರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಮಹಿಳೆಗೆ ಮೀಸಲಿಟ್ಟ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಗಿರಿಕೋಟೆಯ 3ನೇ ವಾರ್ಡಿನ ಎನ್.ತುಳಸಿ ರವಿ ಏಕೈಕ ಅಭ್ಯರ್ಥಿಯಾಗಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್.ತುಳಸಿ ರವಿ, ನೀಡಿರುವ ಸ್ಥಾನಕ್ಕೆ ನ್ಯಾಯ ಒದಗಿಸಲು ನಾಗರಿಕರಿಗೆ ಕುಡಿಯುವ ನೀರು, ಸ್ವಚ್ಛತೆ, ಗುಣಮಟ್ಟದ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು. ಜೊತೆಗೆ ತಮ್ಮನ್ನು ಆಯ್ಕೆ ಮಾಡಲು ಸಹಕರಿಸಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಸದಸ್ಯ ಜೆ.ವಿ.ನಾರಾಯಣಸ್ವಾಮಿ ಇದ್ದರು.