ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೆಕ್ಯಾನಿಕ್ ಮೇಲೆ ಹಲ್ಲೆ

Mainashree
Updated On : 20 Mar 2014, 12:29 pm

ಚಿಂತಾಮಣಿ: ಇಬ್ಬರು ಹೆಂಡತಿಯರನ್ನು ಕಟ್ಟಿಕೊಂಡ ಗಂಡನಿಗೆ ಮೊದಲನೆ ಹೆಂಡತಿ ಸಂಬಂಧಿಕರು ಗೂಸ ನೀಡಿ ಮರಕ್ಕೆ ಕಟ್ಟಿ ಹಾಕಿ ಎಚ್ಚರಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಾರಪೇಟೆಯ ನೀಲಿಗಿರಿ ತೋಪಿನಲ್ಲಿ ನಡೆದಿದೆ. ಇಬ್ಬರು ಹೆಂಡತಿಯರನ್ನು ಕಟ್ಟಿಕೊಂಡ ಮೆಕ್ಯಾನಿಕ್ ರಫೀಕ್ ಎಂಬಾತನನ್ನು ಕಳೆದ ಮಂಗಳವಾರ ರಾತ್ರಿ ಮೊದಲನೇ ಪತ್ನಿಯ ಸೋದರರು ಉಪ್ಪಾರಪೇಟೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಈತನನ್ನು ಕಟ್ಟಿ ಹಾಕಿ ಗೂಸ ನೀಡಿರುವುದಾಗಿ  ದೂರು ನೀಡಿದ್ದಾರೆ.
ಚಿನ್ನದಗಣಿ ಶಾಫ್ಟ್‌ನಲ್ಲಿ ಬೆಂಕಿ
ಕೆಜಿಎಫ್: ಬಿಜಿಎಂಎಲ್ ಚಿನ್ನದಗಣಿ ಎಡ್ಗರ್ ಶಾಫ್ಟ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಶಾಫ್ಟ್‌ನಲ್ಲಿದ್ದ ಟೀಕ್ ಮರಗಳ ಹಲಗೆಗಳು ಸಂಪೂರ್ಣ ಸುಟ್ಟುಹೋಗಿ ಯಂತ್ರೋಪಕರಣಗಳಿಗೆ ಬೆಂಕಿ ತಾಗಿರುವ ಘಟನೆ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಚಾಂಪಿಯನ್‌ರೀಫ್ ಪ್ರದೇಶದಲ್ಲಿರುವ ಬಿಜಿಎಂಎಲ್ ಚಿನ್ನದ ಗಣಿ ಎಡ್ಗರ್ ಶಾಫ್ಟ್ ಮಿಲ್‌ನೊಳಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದದ್ದನ್ನು ಕಂಡ ಭದ್ರತಾ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಕಾಲ ಬೆಂಕಿ ಆರಿಸಲು ಹರಸಾಹಸಪಟ್ಟರು. ಆಕಸ್ಮಿಕ ಬೆಂಕಿಯಿಂದ ಚಿನ್ನದ ಗಣಿಯ ಎಡ್ಗರ್ ಶಾಫ್ಟ್‌ನಲ್ಲಿ ಭೂಮಿಯ ಆಳದಿಂದ ಚಿನ್ನದ ಅದಿರನ್ನು ತೆಗೆಯುತ್ತಿದ್ದ ದೊಡ್ಡ ಗಾತ್ರದ ಮರದ ಪೆಟ್ಟಿಗೆ, ಕೊಠಡಿಯಲ್ಲಿ ಅಳವಡಿಸಿದ್ದ ಟೀಕ್ ಮರದ ಹಲಗೆಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಯಂತ್ರೋಪಕರಣಗಳಿಗೆ ಬೆಂಕಿ ತಾಗಿದ್ದು ಅಪಾರ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.  ಸ್ಥಳಕ್ಕೆ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ, ಬಿಜಿಎಂಎಲ್ ಚಿನ್ನದ ಗಣಿಯ ಭದ್ರತಾಧಿಕಾರಿ ಆನಂದ್‌ಸಿಂಗ್ ರಾವತ್, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಪರಿಶೀಲಿಸಿದರು.
ಪೆಟ್ಟಿಗೆ ಅಂಗಡಿಗೆ ಬೆಂಕಿ; ರು. 50 ಸಾವಿರ ನಷ್ಟ
ಬಂಗಾರಪೇಟ: ದುಷ್ಕರ್ಮಿಗಳು ಪಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟ ಪರಿಣಾಮ ಅಂಗಡಿಯೊಳಗಿದ್ದ ವಸ್ತುಗಳು ಬೆಂಕಿಗೆ ಸಂಪೂರ್ಣ ಭಸ್ಮವಾಗಿ ಸುಮಾರು 50 ಸಾವಿರ ರು.ಗಳಷ್ಟು ನಷ್ಟ ಸಂಭವಿಸಿದೆ.
ತಾಲೂಕಿನ ಬೂದಿಕೋಟೆ ಗ್ರಾಮದ ಆಶೋಕ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಂಡಿಗೆ ಕಳೆದ ರಾತ್ರಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು ಅಂಗಡಿಯೊಳಗಿದ್ದ ಎಲ್ಲಾ ಸಮಾಗ್ರಿಗಳು ಸುಟ್ಟು ಭಸ್ಮವಾಗಿವೆ. ಅಂಗಡಿ ಹಿಂದೆ ಇಟ್ಟಿದ್ದ 180 ಟೊಮೇಟೋ ಖಾಲಿ ಬಾಕ್ಸ್‌ಗಳು ಸುಟ್ಟು ಭಸ್ಮವಾಗಿದೆ. ಇದರಿಂದ ಸುಮಾರು 50 ಸಾವಿರ ರು.ಗಳಷ್ಟು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಆಶೋಕ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement