ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಗೀತ ಕ್ಷೇತ್ರಕ್ಕೆ ಸವಿತಾ ಸಮಾಜದ ಕೊಡುಗೆ ಅಪಾರ

Mainashree
Updated On : 20 Mar 2014, 12:31 pm

ಟೇಕಲ್: ರಾಷ್ಟ್ರೀಯ ಸಂಗೀತ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ದಾಟಿ ಮುನ್ನುಗ್ಗುತ್ತಿರುವ ಸವಿತಾ ಸಮಾಜ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಪ್ರೊ.ಎನ್.ವಿ. ನರಸಿಂಹಯ್ಯ ಹೇಳಿದರು.
ಮಾಸ್ತಿ ಗ್ರಾಮದಲ್ಲಿ ಸವಿತಾ ಸಮಾಜ ಸಂಘ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಮತ್ತು ಪುರಂದರ ದಾಸರ 22ನೇ ಆರಾಧನ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ತ್ಯಾಗರಾಜರು ಪುರಂದರದಾಸರ ಸ್ಫೂರ್ತಿದಾಯಕವಾಗಿ ಡೋಲು ಹಾಗೂ ನಾದಸ್ವರದ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ.  ತ್ಯಾಗರಾಜರ 30 ಸಾವಿರ ಕೀರ್ತನೆಗಳಲ್ಲಿ 2 ಸಾವಿರ ಕೀರ್ತನೆಗಳು ಮಾತ್ರ ಲಭಿಸಿದ್ದು, ಆ ಕೀರ್ತನೆಗಳನ್ನು ಡೋಲು ಮತ್ತು ನಾದಸ್ವರ ಮೂಲಕ ಪ್ರದರ್ಶನ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಿರುಚಿರಾಪಲ್ಲಿ ನಾದಸ್ವರ ವಿಧ್ವಾಂಸರಾದ ಕಲೈಮಾಮಣಿ ಶೇಕ್ ಮೆಹಬೂಬಬ್ ಸುಬಾನಿ, ಖಾಲಿಸಾಬಿ, ಮೆಹಬೂಬ್, ತಾರಪುರಂ ವಿ.ಎಂ. ಗಣೇಶ್, ತಿರುಕಡೆಯೂರ್ ಟಿ.ಜಿ. ಬಾಬು ರವರಿಂದ ರಾತ್ರಿ ಅಮೋಘನಾದಸ್ವರ ಕಚೇರಿ ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement