ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆನರಾ ಬ್ಯಾಂಕ್‌ನಿಂದ ಪುಸ್ತಕ ಭಂಡಾರದ ಕೊಡುಗೆ

Mainashree
Updated On : 21 Mar 2014, 12:34 pm

ಕೋಲಾರ: ಸಾಮಾನ್ಯ ಜ್ಞಾನದ ವೃದ್ಧಿಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಿ ಎಂದು ಬೆಂಗಳೂರಿನ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಕೆ. ಲಕ್ಷ್ಮಣ್ ಕಾಮತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ತ್ಯಾವನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಕ್ಕಲೇರಿ ಕೆನರಾ ಬ್ಯಾಂಕ್‌ವತಿಯಿಂದ ಉದ್ಯಮ ವಲಯದ ಸಾಮಾಜಿಕ ಕಾಳಜಿಯಡಿ ಶಾಲೆಗೆ ಹಿಂದಿ-ಕನ್ನಡ ಗ್ರಂಥಾ ಭಂಡಾರದ ಕೊಡುಗೆ ಹಸ್ತಂತರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ನಮ್ಮ ಮಾತೃಭಾಷೆಯಾಗಿದ್ದು, ಅದನ್ನು ಗೌರವಿಸೋಣ ಆದರೆ ನಾವು ವಿಶಾಲ ಭಾರತದ ಪ್ರಜೆಗಳಾದ ಕಾರಣ ಇತರೆ ಭಾಷೆಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಾಮರಸ್ಯದ ಬದುಕು ಸಾಧ್ಯವೆಂದರು.
ಕೆನರಾ ಬ್ಯಾಂಕ್ ತನ್ನ ಸಾಮಾಜಿಕ ಸೇವೆಯನ್ನು ಮುಂದುವರೆಸಿದ್ದು, ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೆಚ್ಚಿನ ನೆರವು ನೀಡಿದೆ, ಹಾಗೆಯೇ ಪ್ರತಿ ಬ್ಯಾಂಕ್ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಅಗತ್ಯ ನೆರವು ನೀಡುವಲ್ಲಿಯೂ ಹಿಂದೆ ಬಿದ್ದಿಲ್ಲ ಎಂದರು.
ಬ್ಯಾಂಕಿನ ರಾಷ್ಟ್ರಭಾಷಾ ವಿಭಾಗದ ವರಿಷ್ಠ ಪ್ರಬಂಧಕ ರವೀಂದ್ರಕುಮಾರ್ ಗುಪ್ತಾ, ಹಿಂದಿ ರಾಷ್ಟಭಾಷೆಯಾದ್ದರಿಂದ ನಮ್ಮ ಮಾತೃಭಾಷೆಯೊಂದಿಗೆ ಅದನ್ನು ಕಲಿಯುವುದರಿಂದ ಬ್ಯಾಂಕಿಂಗ್ ಮಾತ್ರವಲ್ಲದೇ ಕೇಂದ್ರ ಸರ್ಕಾರಿ ನೌಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಕ್ಕಲೇರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅರ್ಚನಾ ಸಿಂಗ್, ನಮ್ಮ ಬ್ಯಾಂಕಿನ ಉದ್ಯಮ ವಲಯದ ಸಾಮಾಜಿಕ ಕಾಳಜಿಯ ಭಾಗವಾಗಿ ಶಾಲೆಗಳಿಗೆ ಈ ಪುಸ್ತಕ ಭಂಡಾರದ ಕೊಡುಗೆ ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು ಮಾತನಾಡಿದರು. ಪೂರ್ಣಚಂದ್ರಾಚಾರ್, ಗ್ರಾಪಂ ಸದಸ್ಯ ಮುನಿಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement