ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೊಯ್ಲಿಯವರ ಚರಾಸ್ತಿ ರು. 48 ಲಕ್ಷ

Mainashree
Updated On : 21 Mar 2014, 12:33 pm

ಚಿಕ್ಕಬಳ್ಳಾಪುರಛ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವಂತೆ 48,19,884 ರು. ಮೌಲ್ಯದ ಚರಾಸ್ತಿ ಹೊಂದಿದ್ದು ಮತ್ತು ಸ್ಥಿರಾಸ್ತಿಯನ್ನೇ ಹೊಂದಿಲ್ಲ. ಮೊಯ್ಲಿರವರಿಗಿಂತ ಅವರ ಪತ್ನಿಯೇ ಆರ್ಥಿಕವಾಗಿ ಹೆಚ್ಚಿನ ಸದೃಢರಾಗಿದ್ದಾರೆ.
ಮೊಯ್ಲಿರವರ ಕೈಯಲ್ಲಿ ಸದ್ಯ 3,645 ರು. ಹಣ ಇದ್ದು ದೆಹಲಿಯ ಕೆನರಾ ಬ್ಯಾಂಕಿನಲ್ಲಿ 35,3192, ಬೆಂಗಳೂರಿ ಕೆನರಾ ಬ್ಯಾಂಕಿನಲ್ಲಿ 3,96,269 ರು., ಎಚ್‌ಡಿಎಫ್ಸಿ ಬ್ಯಾಂಕಿನಲ್ಲಿ 2,42,563 ರು., ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 77,099 ರು.ಗಳಿದ್ದು ದೆಹಲಿ ಕೆನರಾ ಬ್ಯಾಂಕಿನಲ್ಲಿ 25,40,122 ರು. ಮುಂಗಡ ಠೇವಣಿಯನ್ನಿಟ್ಟಿದ್ದಾರೆ. ವಿಜಯಾ ಬ್ಯಾಂಕ್‌ನಲ್ಲಿ 41 ಸಾವಿರ ರು. ಷೇರನ್ನು ಹಾಕಿದ್ದಾರೆ. ಉಳಿದಂತೆ 4,22,994 ರು. ಮೌಲ್ಯದ ಟೊಯಾಟೋ ಎಥಿಸೋ ಲಿವಾ ವಾಹನವನ್ನು ಖರೀದಿ ಮಾಡಿದ್ದಾರೆ. 23 ಸಾವಿರದ ರು. ಮೌಲ್ಯದ ಗೃಹ ಪೀಠೋಪಕರಣ, ಮನೆ ಮುಂಗಡ ಬಾಡಿಗೆ  3,60,000 ಮತ್ತು ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ 3,60,000 ರು. ಠೇವಣಿಯನ್ನಿಟ್ಟಿದ್ದಾರೆ.
ಕೃಷಿ ಭೂಮಿ, ಯಾವುದೇ ಭೂಮಿ ಖರೀದಿ, ವಾಣಿಜ್ಯ ಕಟ್ಟಡ ಸೇರಿದಂತೆ ಯಾವುದೇ ಆಸ್ತಿಪಾಸ್ತಿಯನ್ನು ಹೊಂದಿಲ್ಲ. ಕೆನರಾ ಬ್ಯಾಂಕಿನಲ್ಲಿ ಕಾರಿಗಾಗಿ 1,87,555 ರು., ಮಾಲತಿ ವೀರಪ್ಪ ಮೊಯ್ಲಿರವರಿಂದ 10 ಲಕ್ಷ ರು. ಸಾಲ, ಎ. ನವೀನ್ ರವರಿಂದ ಒಂದು ಲಕ್ಷ, ಆನಂದಪ್ಪರವರಿಂದ 1.10 ಲಕ್ಷ ರು., ಇತರೆ 19,953 ರು. ಸೇರಿದಂತೆ 14,17,508 ರು. ಸಾಲವಿದ್ದಾರೆ. ತೆರಿಗೆ ಕಟ್ಟಲು 2012-13 ರಲ್ಲಿ 9,54,704 ರು. ಆದಾಯವನ್ನು ತೋರಿಸಿಕೊಂಡಿದ್ದಾರೆ. ಉಳಿದಂತೆ ಅವರ ಪತ್ನಿ 27.37 ಎಕರೆ ಕೃಷಿ ಭೂಮಿ ಮತ್ತು 20.87, 5.5 ಎಕರೆ ಬಂಜರು ಭೂಮಿಯನ್ನು ಹೊಂದಿದ್ದಾರೆ. ಚರಾಸ್ತಿ 48,99,884 ರು. ಮತ್ತು 7,63,42,842 ರು. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. 2,08,40,000 ರು. ಸಾಲವನ್ನು ಮಾಡಿದ್ದಾರೆ.
ಮುನಿಯಪ್ಪ ಗೆಲುವು ಖಚಿತ: ವಿಶ್ವಾಸ
ಟೇಕಲ್: ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಈ ಬಾರಿ ಹೆಚ್ಚು ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚನ್ನಕೇಶವ ಅಭಿಪ್ರಾಯಪಟ್ಟರು.
ಟೇಕಲ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜನರ ಅನುಕೂಲಕ್ಕಾಗಿ ಚಿಕ್ಕಬಳ್ಳಾಪುರ ಬೆಂಗಳೂರು ರೈಲನ್ನು ನೀಡಿದ್ದು, ಚಿನ್ನದ ಗಣಿ ಪುನಶ್ಚೇತನ ಅವರ ಸಾಧನೆಯಾಗಿದೆ ಎಂದರು.
26 ರಂದು ಮಾಲೂರಿನಲ್ಲಿ ಕೆ.ಎಚ್. ಮುನಿಯಪ್ಪನವರಿಂದ ಸಾರ್ವಜನಿಕ ಸಭೆ ಏರ್ಪಸಲಾಗಿದ್ದು, ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಪ್ರೋತ್ಸಾಹ ನೀಡಬೇಕೆಂದು ಕೋರಿದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಸ್.ಎನ್. ರಘುನಾಥ್ ಮಾತನಾಡಿ, ಊರು ಕೇರಿ ಗೊತ್ತಿಲ್ಲದವರು ಜೆಡಿಎಸ್‌ನಲ್ಲಿದ್ದು  ಜನ ಯಾವ ರೀತಿ ಬೆಂಬಲಿಸುತ್ತಾರೆ ಎಂದರು. ಕೆ.ಪಿ.ಸಿ.ಸಿ. ಸದಸ್ಯ ಆರ್. ರಾಜಣ್ಣ, ಬ್ಲಾಕ್ ಕಾಂಗ್ರೆಸ್‌ನ ಚನ್ನರಾಯಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಅಶೋಕ್ ಕುಮಾರ್, ಲಕ್ಷ್ಮೀನಾರಾಯಣ್, ಆರ್. ವೆಂಕಟೇಶ್‌ಗೌಡ, ಡಿ.ಕೆ. ಗೋವಿಂದಪ್ಪ, ಹರಿದಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement