ಖರ್ಚು ವೆಚ್ಚಗಳ ನಿಗಾ ಇಡಿ
ಮುಳಬಾಗಲು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರಾಜಕೀಯ ಪಕ್ಷಗಳ ಖರ್ಚು ವೆಚ್ಚಗಳ ಕುರಿತು ಚುನಾವಣಾ ತಂಡ ಹೆಚ್ಚಿನ ಗಮನ ಹರಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕ ಎಸ್. ಸುದರ್ಶನ್ ಸಾಗರ್ ಸೂಚಿಸಿದರು.
ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ ಅವರು ನಂತರ ಮಿನಿ ವಿಧಾನಸೌಧದಲ್ಲಿ ನೀತಿ ಸಂಹಿತೆ ಜಾರಿ ತಂಡಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.
ಚುನಾವಣೆ ಮುಕ್ತಾವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನೀತಿ ಸಂಹಿತೆ ಜಾರಿಗೊಳಿಸಲಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ 7 ತಂಡಗಳು ಸೇರಿದಂತೆ 15 ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಅಭ್ಯರ್ಥಿಯ ಚುನಾವಣಾ ವೆಚ್ಚ 70 ಲಕ್ಷ ರು.ಗಳಿಗೆ ಮಿತಿಗೊಳಿಸಿದೆ. ದೇಗುಲ, ಚರ್ಚ್, ಮಸೀದಿಗಳಲ್ಲಿ ಪ್ರಚಾರ ಸಭೆ ನಡೆಸುವುದು ಹಾಗೂ ಪ್ರಚಾರದ ವೇಳೆ ಯಾವುದೇ ವ್ಯಕ್ತಿ, ಮತದಾರರಿಗೆ ಹುಣ ಅಥವ ಉಡುಗೋರೆ ನಿಷೇಧಿಸಲಾಗಿದೆ ಎಂದರು.